ಉಪ್ಪಿನಂಗಡಿ:
ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಉಪ್ಪಿನಂಗಡಿಯಲ್ಲಿ ಆರೋಪಿಯೋರ್ವನನ್ನು
ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ
ವಾಸ್ತವ್ಯವಿದ್ದ ಮುಹಮ್ಮದ್ ಹನೀಫ್ (34) ಬಂಧಿತ ಆರೋಪಿ.
ಮೂಲತಃ
ಮಂಜೇಶ್ವರ ಮಚ್ಚಂಪಾಡಿ ನಿವಾಸಿಯಾಗಿರುವ ಈತನನ್ನು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಸಂದರ್ಭ ಅನುಮಾನಗೊಂಡ ಪೊಲೀಸರು ಮಂಜೇಶ್ವರ ಸಮೀಪದಿಂದ ವಶಕ್ಕೆ ಪಡೆದಿದ್ದಾರೆ.
ಈತನನ್ನು
ವಿಚಾರಿಸಿದಾಗ ಈತ ಹಲವು ಪ್ರಕರಣ
ಆರೋಪಿ ಎಂದು ತಿಳಿದುಬಂದಿದೆ. ಜುಲೈ 12ರಂದು ಸುಂಕದಕಟ್ಟೆಯ ನೆಚ್ಚಿಲಪದವು ಎಂಬಲ್ಲಿ ಬೀಗ ಜಡಿದ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಗೈದ ಪ್ರಕರಣದ ಆರೋಪಿಯಾಗಿರುವ ಈತನ ವಿರುದ್ಧ ಕರ್ನಾಟಕದ ಹಲವು ಕಡೆ ಹಲವು ಪ್ರಕರಣಗಳಿರುವುದು ತನಿಖೆಯಿಂದ ತಿಳಿದು ಬಂದಿದೆ.