ಆಲಂಕಾರು: ಇತ್ತೀಚೆಗೆ ನಿಧನರಾದ ಕೊಯಿಲ ಗ್ರಾಮದ ಕೆರೆಕೋಡಿ ನಿವಾಸಿ ವರದರಾಜ ಶೆಟ್ಟಿ ಅವರ ಕುಟುಂಬಕ್ಕೆ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗ ಮತ್ತು ಬಿಜೆಪಿ ಸಬಳೂರು ಬೂತ್ ಸಮಿತಿ ಸದಸ್ಯರಿಂದ ಮತ್ತು ದಾನಿಗಳಿಂದ ಸಂಗ್ರಹಿಸಲಾದ ಧನ ಸಹಾಯವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಕೊಯಿಲ ಗ್ರಾ.ಪಂ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಸದಸ್ಯ ಚಿದಾನಂದ ಪಾನ್ಯಾಲು, ಸಬಳೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಸಂಕೇಶ, ಪ್ರಮುಖರಾದ ರವೀಂದ್ರ ಸಂಕೇಶ, ಶ್ರೀ ರಾಮ ಗೆಳೆಯರ ಬಳಗದ ಪ್ರಮುಖರಾದ ಮೋಹನ್ ಓಕೆ, ದಿನೇಶ್ ಬುಡಲೂರು, ಪುನಿತ್ ಸೀಗೆತ್ತಡಿ ಮತ್ತಿತರಿದ್ದರು.