Home ಪ್ರಮುಖ ಸುದ್ದಿ Uppinangady station limit: ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ 14 ರ ಹರೆಯದ ಬಾಲಕಿ ತೋಟದಲ್ಲಿ...

Uppinangady station limit: ಕಾರ್ಮಿಕರಾಗಿ ಆಗಮಿಸಿದ್ದ ಕುಟುಂಬದ 14 ರ ಹರೆಯದ ಬಾಲಕಿ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಕಡಬ ಟೈಮ್ಸ್: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ  ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ  ಕುಟುಂಬವೊಂದರ 14 ರ ಹರೆಯದ ಬಾಲಕಿ  ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆದಿತ್ಯವಾರ ರಾತ್ರಿ ಸಂಭವಿಸಿದೆ.
ಮೂಲತಃ ಜಾಖಂಡ್ ರಾಜ್ಯದ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್ಪಾ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ತನ್ನ ಪತ್ನಿ ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಒರ್ವರ ತೋಟದ ಕೆಲಸಕ್ಕೆ ಆಗಮಿಸಿದ್ದರು. 
ಬಾಲಕಿ  ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುತ್ತಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here