Home ಪ್ರಮುಖ ಸುದ್ದಿ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ:ರಾತ್ರಿ ವೇಳೆ ಮಸೀದಿ ವಠಾರಕ್ಕೆ ಬಂದ ಇಬ್ಬರು ವ್ಯಕ್ತಿಗಳಿಂದ ಮದ್ರಸ ವಿದ್ಯಾರ್ಥಿಗಳಿಗೆ ಬೆದರಿಕೆ

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ:ರಾತ್ರಿ ವೇಳೆ ಮಸೀದಿ ವಠಾರಕ್ಕೆ ಬಂದ ಇಬ್ಬರು ವ್ಯಕ್ತಿಗಳಿಂದ ಮದ್ರಸ ವಿದ್ಯಾರ್ಥಿಗಳಿಗೆ ಬೆದರಿಕೆ

1
0

 ಕಡಬ ಟೈಮ್: ಸುಬ್ರಹ್ಮಣ್ಯ
ಠಾಣಾ ವ್ಯಾಪ್ತಿಯ  ಎಲಿಮಲೆ
ಜುಮ್ಮಾ ಮಸೀದಿ ವಠಾರಕ್ಕೆ ರಾತ್ರಿ ವೇಳೆ ಇಬ್ಬರು ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಹೋಗಿದ್ದಾರೆಂದು ಮಸೀದಿ ಕಮಿಟಿಯವರು ಠಾಣೆಗೆ ದೂರು ನೀಡಿದ ಘಟನೆ ಶುಕ್ರವಾರ ನಡೆದಿದೆ.

UNIC-KADABA

 

ಎಲಿಮಲೆ
ಮಸೀದಿಗೆ ಗುರುವಾರ ರಾತ್ರಿ ಸುಮಾರು 11 ಘಂಟೆಗೆ ಬಂದ ಇಬ್ಬರು ಕಿಡಿಗೇಡಿಗಳು ಮಸೀದಿಯ ಆವರಣದಲ್ಲಿ ನಿಂತು ಜೋರಾಗಿ ಬೈದು ಬೆದರಿಕೆ ಹಾಕಿದ್ದಾರೆ. ಸತೀಶ  ಮತ್ತು
ಇತರರು ಕೃತ್ಯ ನಡೆಸಿದ್ದಾರೆ
ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.


GURUJI ADD

ಎರಡು
ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲಿ ಇಬ್ಬರು ಅಡ್ಡಗಟ್ಟಿ ನೀವು ರೀತಿಯ ಟೋಪಿಗಳನ್ನು
ಧರಿಸಿ ಶಾಲೆಗೆ ಹೋಗಬಾರದು ಎಂದು ಹೆದರಿಸಿದ್ದರು ಎಂದೂ ಸುಬ್ರಮಣ್ಯ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ



ಘಟನೆಗೆ ಸಂಬಂಧಿಸಿ ಶುಕ್ರವಾರ ಪುತ್ತೂರು ಡಿ ವೈ ಎಸ್ ಪಿ ಅರುಣ್ ನಾಗೇಗೌಡ, ಸುಬ್ರಮಣ್ಯ ಠಾಣಾ ಎಸ್.ಐ.
ಕಾರ್ತಿಕ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ
ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here