ಕುಕ್ಕೆ
ಸುಬ್ರಹ್ಮಣ್ಯ : ಇಲ್ಲಿನ ಗ್ರಾ.ಪಂ ವ್ಯಾಪ್ತಿಯ
ವನದುರ್ಗ ದೇವಿ ದೇವಸ್ಥಾನದ ಬಳಿ ವಿದ್ಯುತ್ ಕಂಬದಲ್ಲಿ ಜಾಹೀರಾತು ಫಲಕ ಪ್ರತ್ಯಕ್ಷಗೊಂಡಿದೆ.
ಈಗ ವಿದ್ಯುತ್
ಕಂಬದಲ್ಲಿ ಪ್ರದರ್ಶಿಸಲು ಅನುಮತಿ ಕೊಟ್ಟವರಾರು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ನಿರ್ದಿಷ್ಟ ಸ್ಥಳದಲ್ಲಿ ಜಾಹೀರಾತು ಹಾಕಲು ಗ್ರಾ.ಪಂ ಅಧಿಕಾರಿಗಳು ಅನುಮತಿ
ನೀಡುತ್ತಾರೆ. ಆದರೆ ಬಟ್ಟೆ ಮಳಿಗೆಯೊಂದು ತನ್ನ
ಜಾಹೀರಾತನ್ನು ವಿದ್ಯುತ್ ಕಂಬದಲ್ಲಿ ಹಾಕಿದ್ದು ಮೆಸ್ಕಾಂ ಇಲಾಖೆ ಅನುಮತಿ ನೀಡಿದೆಯೇ ಎಂಬ ಸಂದೇಹ ಜನರದ್ದಾಗಿದೆ.
ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನದಿಂದ ಅಳವಡಿಸಿದ ದಾರಿದೀಪದ ಕಂಬಕ್ಕೆ ಸೇರಿಸಿ ಕಟ್ಟಲಾಗಿದೆ. .ನಿರಂತರ ಸುರಿಯುವ ಮಳೆಗೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಜನರು ಪ್ರಸ್ನಿಸುತ್ತಿದ್ದಾರೆ. ಸ್ಥಳೀಯಾಡಳಿತ ಕೂಡಲೇ ತೆರವಿಗೆ ಮುಂದಾಗಬೇಎಂಬ ಆಗ್ರಹ ಕೇಳಿ ಬಂದಿದೆ.