ಕಡಬ ಟೈಮ್: ಅರಣ್ಯ
ಇಲಾಖೆಯ ನಿವೃತ್ತ ಉಪ ವಲಯಾರಣ್ಯಾಧಿಕಾರಿ ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ನಿವಾಸಿ ಪದ್ಮನಾಭ
ಗೌಡರವರು ಅಸೌಖ್ಯದಿಂದ ಆ.20ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅರಣ್ಯ
ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ನೇಮಕಗೊಂಡು ನಂತರ ಉಪವಲಯಾರಣ್ಯಾಧಿಕಾರಿಯಾಗಿ ಪದೋನ್ನತಿ ಪಡೆದಿದ್ದರು.
ಸುಳ್ಯ,
ಪಂಜ, ಬಳ್ಪ, ಉಕ್ಕುಡ ಗೇಟ್, ಸುಬ್ರಹ್ಮಣ್ಯ ಗೇಟ್, ಕುಂದಾಪುರ ಹಾಗೂ ಪಣಂಬೂರಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.