Home ಪ್ರಮುಖ ಸುದ್ದಿ ಪುತ್ತೂರಿನಲ್ಲಿ ನಡೆದ ಘಟನೆ: ಚೂರಿಯಿಂದ ಇರಿದ ಆರೋಪ , ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

ಪುತ್ತೂರಿನಲ್ಲಿ ನಡೆದ ಘಟನೆ: ಚೂರಿಯಿಂದ ಇರಿದ ಆರೋಪ , ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

1
0

 ಕಡಬ ಟೈಮ್:  ಪುತ್ತೂರಿನ
ಕೊಂಬೆಟ್ಟುವಿನಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ  ಚೂರಿಯಿಂದ
ಇರಿದಿರುವುದಾಗಿ ಆರೋಪಿಸಿ ಪುತ್ತೂರು ಸರಕಾರಿ ಆಸ್ಫತ್ರೆಯಲ್ಲಿ ದಾಖಲಾಗಿದ್ದಾಳೆ.

UNIC-KADABA


ಆಕೆಯ
ಕೈಯಲ್ಲಿ
ಗೀರಿದ
ಗುರುತು ಕಂಡು ಬಂದಿದೆ. ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎರಡು ಸಮುದಾಯದ ಯುವಕರು ಆಸ್ಫತ್ರೆ ಮುಂಭಾಗ ಜಮಾಯಿಸಿದ್ದಾರೆ.


ಕೊಂಬೆಟ್ಟು
ಕಾಲೇಜಿನಿಂದ ಪುತ್ತೂರು ಮುಖ್ಯ ಆಂಚೆ ಕಚೇರಿ ಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಾಲೇಜ್ವಿದ್ಯಾರ್ಥಿಗಳು ಬರುತ್ತಿರುವ ವೇಳೆ ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಮುಂಭಾಗ ಘಟನೆ ನಡೆದಿದೆ.

GURUJI ADD


ವಿದ್ಯಾರ್ಥಿನಿ
ಹಾಗೂ  ವಿದ್ಯಾರ್ಥಿಯ
ಮಧ್ಯೆ ಯಾವುದೋ ವಿಷಯಕ್ಕೆ ಸಣ್ಣ ಜಗಳವಾಗಿದೆ . ವೇಳೆ ವಿದ್ಯಾರ್ಥಿಯೂ
ವಿದ್ಯಾರ್ಥಿನಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ ಎಂದು ಹೇಳಲಾಗುತ್ತಿದೆ .

 ಮುಂದುವರಿದ ಭಾಗವಾಗಿ
ವಿದ್ಯಾರ್ಥಿನಿ ಸರಕಾರಿ ಆಸ್ಫತ್ರೆಯಲ್ಲಿ ಆಡ್ಮಿಟ್ಆಗಿದ್ದು, ಆಕೆಯ ಕೈಯಲ್ಲಿ ಗೀರಿದ ಗುರುತು ಕಂಡು ಬಂದಿದೆ .  ವಿದ್ಯಾರ್ಥಿನಿ
ತನಗೆ ಆದೇ ವಿದ್ಯಾರ್ಥಿ ಚೂರಿಯಿಂದ ಇರಿದಿರುವುದಾಗಿ ಆರೋಪಿಸಿರುವುದಾಗಿ ತಿಳಿದು ಬಂದಿದೆ.  ಸದ್ಯ
ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ಪರಿಶೀಲಿಸುತ್ತಿದ್ದು, ಆಕೆಯ ಜತೆಗಿದ್ದ ಬೇರೆ ವಿದ್ಯಾರ್ಥಿಗಳ ಬಳಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here