Home ಪ್ರಮುಖ ಸುದ್ದಿ ನೆಲ್ಯಾಡಿ ವಿವಿ ಘಟಕ ಕಾಲೇಜಿನಲ್ಲಿ ಉದ್ಯೋಗ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ನೆಲ್ಯಾಡಿ ವಿವಿ ಘಟಕ ಕಾಲೇಜಿನಲ್ಲಿ ಉದ್ಯೋಗ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

1
0

ನೆಲ್ಯಾಡಿ:
ಇಲ್ಲಿನ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ
  ಉದ್ಯೋಗ
ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನಕಾರ್ಯಕ್ರಮದಡಿ ತರಬೇತಿ ಕಾರ್ಯಕ್ರಮವು  ಆ.28ರಂದು ನಡೆಯಿತು.

UNIC-KADABA
ಶ್ರೀಮತಿ ಮಂಜೂಷ ಅವರು ಕಾರ್ಯಕ್ರಮ ನಡೆಸಿಕೊಡುತ್ತಿರುವುದು


ಜಿಲ್ಲಾ
ಉದ್ಯೋಗ ವಿನಿಮಯ ಕಚೇರಿಯ  ಕೌನ್ಸಿಲರ್ ಕಂ ಟ್ರೈನರ್
 ಶ್ರೀಮತಿ
ಮಂಜೂಷ ಅವರು  ವಿದ್ಯಾರ್ಥಿಗಳನ್ನು
ಉದ್ಯೋಗಕ್ಕೆ ನೋಂದಣಿ ಮಾಡಿಸುವುದರ ಮೂಲಕ ಉದ್ಯೋಗ ಕಾರ್ಡ್ ನೀಡಿ ವಿದ್ಯಾರ್ಥಿಗಳಿಗೆ  ಅದರ
ಉಪಯುಕ್ತತೆ ಹಾಗೂ ಬಳಸುವಿಕೆಯ ಕುರಿತಂತೆ ಮಾಹಿತಿ ನೀಡಿದರು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಸಂದರ್ಶನ ಎದುರಿಸುವ ಬಗೆಯನ್ನು ತಿಳಿಸಿದರು.

GURUJI ADD


ಈ ಸಂದರ್ಭದಲ್ಲಿ
ಕಾಲೇಜಿನ
ಸಂಯೋಜಕ ಡಾ.
ಸುರೇಶ್  ಹಾಜರಿದ್ದರು ,  ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪಿ ಸೀತಾರಾಮ ಸ್ವಾಗತಿಸಿ
,ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀ ಮತಿ ಪಾವನ ರೈ ಧನ್ಯವಾದವಿತ್ತರು.   ಕಾಲೇಜಿನ

ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here