ಕಡಬ ಟೈಮ್ಸ್: ಬೆಂಗಳೂರಿನ
ಕನ್ನಡ ಸಾಹಿತ್ಯ
ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಚೇತನ
ಫೌಂಡೇಷನ್ ಮತ್ತು ಕಾವ್ಯಶ್ರೀ ಟ್ರಸ್ಟ್ ಇವರ
ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಂದೇ
ಮಾತರಂ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಕೇಶವ
ನೆಲ್ಯಾಡಿಯವರಿಗೆ ಕಾವ್ಯ
ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವ
ದಾಖಲೆಗಾಗಿ ಏಕಕಾಲಕ್ಕೆ ಸಾವಿರಾರು ಕವಿಗಳಿಂದ ವಾಟ್ಸಾಪ್ ಗುಂಪಿನಲ್ಲಿ ಕವಿತೆ ಬರೆಸಿ ಸಾಹಿತ್ಯಿಕ ವಿಭಾಗದಲ್ಲಿ ದಾಖಲೆ ನಿರ್ಮಿಸುವ ಸಲುವಾಗಿ ಕವಿತೆಗಳ ಸಂಕಲನ ಮಾದಲಾಗಿದ್ದು ಈ ವಿಭಾಗದಲ್ಲಿ ಈ ಭಾಗವಹಿಸಿರುವುದಕ್ಕೆ ಈ ಗೌರವ ನೀಡಲಾಗಿದೆ.
ಸಾಹಿತ್ಯ
ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ,ತುಳು ಭಾಷೆಯಲ್ಲಿ ಸಾಹಿತ್ಯ ಬರೆದು ಜನ ಮೆಚ್ಚುಗೆ ಪಡೆದಿದ್ದಾರೆ. ಇದಲ್ಲದೆ
ತುಳು
ನಾಟಕ, ತುಳು ಕವನ ,ಕನ್ನಡ ಕವನ, ಕಥೆ ಬೆರೆಯುವುದರ ಜೊತೆಗೆ ಶೌರ್ಯ ವಿಪತ್ತು ತಂಡದಲ್ಲಿಯೂ ತೊಡಗಿಕೊಂಡು ಸಮಾಜ
ಮುಖಿಯಾಗಿ ತೊಡಗಿಕೊಂಡಿದ್ದಾರೆ .