ಕಡಬ ಟೈಮ್: ಬೊಳ್ಳಿಮಾರು
ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್ ಕಾಣಿಕೆ ಡಬ್ಬಿಗಳನ್ನು ಆಗಸ್ಟ್ 17ರ ರಾತ್ರಿ ಒಡೆದು
ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಿಂದ ವರದಿಯಾಗಿದೆ.
ಈ
ಬಗ್ಗೆ ದೇವಸ್ಥಾನದ ಧರ್ಮದರ್ಶಿ ವಿಜಯ ಸಾಲ್ಯಾನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಸಿ
ಕೆಮರಾಗಳನ್ನು ಹಾನಿಗೊಳಿಸಿ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಹಾಗೂ ಸುಮಾರು 8 ಸಾ. ರೂ. ಮೌಲ್ಯದ ಸಿ.ಸಿ. ಕೆಮರಾದ
ಡಿವಿಆರ್ ಕಳವು ಗೈಯ ಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪುಂಜಾಲಕಟ್ಟೆ
ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.