ಕಡಬ ಟೈಮ್: ಕಡಬ:
ರಸ್ತೆ ಕನ್ʼಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳ್ಳತನ ಮಾಡಿದ ಪ್ರಕರಣದಡಿ ಅಂತರ್ ಜಿಲ್ಲಾ
ಕಳ್ಳ ಹಾಗೂ ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯನನ್ನು ಉಪ್ಪಿನಂಗಡಿ ಠಾಣಾ ತನಿಖಾ ಪಿಎಸ್ ಐ ರುಕ್ಮ ನಾಯ್ಕ್ ನೇತೃತ್ವದ
ತಂಡ ಕಡಬದ ಆತನ ಮನೆಯಿಂದ ದಸ್ತಗಿರಿ ಮಾಡಿದ್ದಾರೆ.
10ಕ್ಕೂ
ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ
ಠಾಣೆಯ ಪೊಲೀಸರಿಗೆ ಬೇಕಾಗಿದ್ದ, ಕಡಬ ತಾಲೂಕು ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಅಬ್ದುಲ್ ಹಮೀದ್
ಅಲಿಯಾಸ್ ಹಮೀದ್ (27) ಎಂಬಾತ ಬಂಧಿತ ಆರೋಪಿ.
ಬಂಧಿತ ಆರೋಪಿ ಹಮೀದ್ |
ಆರೋಪಿಯು ಕಡಬ ತಾಲೂಕಿನ
ಕೌಕ್ರಾಡಿ ಗ್ರಾಮದ ಪರಿಯಶಾಂತಿ, ಬೆದ್ರೋಡಿ ನೀರಕಟ್ಟೆ ಎಂಬಲ್ಲಿ ಕಳೆದ ವರ್ಷ ಹಾಗೂ ಈ ವರ್ಷ
ಕಳ್ಳತನ ಮಾಡಿರುವುದಾಗಿ ತಪ್ಪೋಪ್ಪಿ ಗೊಂಡಿರುತ್ತಾನೆ.
ಆರೋಪಿಯು 10-10-2023 ರಂದು ಪುತ್ತೂರು ತಾಲೂಕು
ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಹೆದ್ದಾರಿ 75 ರ ಅಗಲೀಕರಣ ಕಾಮಗಾರಿಗೆ ಉಪಯೋಗಿಸುವ ಕೆ.ಎನ್.
ಆರ್ ಸಂಸ್ಥೆಯ ಕಬ್ಬಿಣದ ಸೀಟ್ ಗಳನ್ನು ಕಳ್ಳತನ ಮಾಡಿರುತ್ತಾನೆ.
ಈತನ
ವಿರುದ್ದ ವಿವಿಧ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ . 1) ಮಂಗಳೂರು ಕಂಕನಾಡಿ ಪೊಲೀಸ್ ಠಾಣಾ ಎನ್.ಡಿ.ಪಿ.ಎಸ್ ಕಾಯ್ದೆ.2)
ಮಂಗಳೂರು ಉತ್ತರ ಪೊಲೀಸ್ ಠಾಣೆ ಕನ್ನ ಕಳವು, 3) ಉಡುಪಿ ಜಿಲ್ಲೆಯ ಗಂಗೋಳ್ಳಿ ಪೊಲೀಸ್ ಠಾಣಾ ಆತ್ಮಹತ್ಯೆ
ಪ್ರಚೋದನೆ, 4) ದಾವಣಗೆರೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಸುಲಿಗೆ, 5) ಸಕಲೇಶಪುರ ನಗರ ಪೊಲೀಸ್
ಠಾಣಾ ಸಂಶಯಾಸ್ಪದ ವಶಕ್ಕೆ
6)
ಸಕಲೇಶಪುರ ನಗರ ಪೊಲೀಸ್ ಠಾಣಾ ಸಾಮಾನ್ಯ, ಕಳವು 7) ಕಡಬ ಪೊಲೀಸ್ ಠಾಣಾ ಸಾಮಾನ್ಯ ಕಳವು. ಕನ್ನಕಳವು
8) ಬೆಂಗಳೂರು ಕೊತ್ತುಲೂರು ಪೊಲೀಸ್ ಠಾಣಾ ದರೊಡೆ ಪ್ರಕರಣ 9) ಗೋಣಿಬೀಡು ಪೊಲೀಸ್ ಠಾಣೆ ದರೊಡೆ ಪ್ರಕರಣ
11) ಬೆಳ್ತಂಗಡಿ ಪೊಲೀಸ್ ಠಾಣಾ ಪ್ರಕರಣ ಗಳಲ್ಲಿ ಅರೋಪಿಯಾಗಿರುತ್ತಾನೆ. ಈ ಎಲ್ಲಾ ಪ್ರಕರಣಗಳು
ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಹಾಗೂ ದಸ್ತಗಿರಿ ವಾರಂಟ್ ಇರುತ್ತದೆ.