ಕುಕ್ಕೆ
ಸುಬ್ರಹ್ಮಣ್ಯ : ಪ್ರಕೃತಿಯನ್ನು
ವ್ಯವಹಾರದ ದೃಷ್ಟಿಯಲ್ಲಿ ನೋಡದೆ ಆಧ್ಯಾತ್ಮಿಕ ನೆಲೆಯಲ್ಲಿ ನೋಡಿದಾಗ ಮತ್ತು ಅದನ್ನು ಗೌರವಿಸಿದಾಗ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ
ಜಿಲ್ಲಾ ಪ್ರಮುಖ ಮಾಧವ ಚಾಂತಾಳ ಹೇಳಿದ್ದಾರೆ
ಅವರು
ಆ.20ರಂದು ಕುಮಾರಧಾರ ಸ್ನಾನ
ಘಟ್ಟದ ಬಳಿ ಮಲೆನಾಡು
ಜನ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ನದಿ
ಪೂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾದ್ಯಮ
ಮಿತ್ರರ ಜೊತೆ ಮಾತನಾಡಿದರು.
ಪ್ರಕೃತಿಯು
ನಮಗೆ ಔಷಧಿ, ಆರೋಗ್ಯ, ಆಹಾರ ಉತ್ಪನ್ನಗಳನ್ನು ನೀಡುತ್ತಾ ನಮ್ಮ ಬದುಕಿನಲ್ಲಿ ಮುಖ್ಯ ಪಾತ್ರವಾಗಿ ಇತ್ತು. ಆದರೆ ನಾವು ಅದನ್ನು ಮರೆತು ರಾಸಾಯನಿಕ ಬಳಕೆಯಿಂದ ಪ್ರಕೃತಿ ನಾಶ ಮಾಡಿದ್ದರಿಂದ ಪ್ರಕೃತಿ ವಿಕೋಪ ಎಂಬ ಭಯಾನಕ ಘಟನೆಗಳು ನಡೆಯುತ್ತಿದೆ. ಇದರಿಂದ ರಕ್ಷಣೆ ಪಡೆಯಲು ಮತ್ತು ನಮ್ಮ ಜಲ, ನೆಲದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಪೂಜನ ಕಾರ್ಯಕ್ರಮ
ಆಯೋಜಿಸಿದ್ದೇವೆ ಎಂದರು.
ನಮ್ಮ
ನೆಲ ಜಲ ಸಂಸ್ಕೃತಿ ಬದುಕಿನ
ರಕ್ಷಣೆಗಾಗಿ ನಮ್ಮ ನಿತ್ಯ ಹೋರಾಟ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ
ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು. ಈ
ಸಂದರ್ಭದಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ
ಸದಸ್ಯರು, ಹರಿಹರೇಶ್ವರ ದೇವಸ್ಥಾನ
ವ್ಯವಸ್ಥಾಪನಸಮಿತಿ ಅಧ್ಯಕ್ಷ ಕಿಶೋರ್
ಕುಮಾರ್ ಕೋಜುಗೂಡು, ಸ್ಥಳೀಯರು ಉಪಸ್ಥಿತರಿದ್ದರು.