ಸುಬ್ರಹ್ಮಣ್ಯ: ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ
ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಯಶ್ ಅವರ ಮುಂದಿನ ಚಿತ್ರ ಶೂಟಿಂಗ್ ಆರಂಭವಾಗುವ ಮೊದಲು ದೇವರ ಆಶೀರ್ವಾದ ಪಡೆಯಲು ಕುಕ್ಕೆಗೆ ಬಂದಿದ್ದಾರೆ ಈ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿ ತೆಗೆಯಲು ಮುಗಿಬಿದ್ದರು.
ಬೆಳ್ತಂಗಡಿ ತಾಲೂಕಿನಲ್ಲಿರುವ ಮಣ್ಣಿನ ಹರಕೆಯಿಂದ ಪ್ರಸಿದ್ಧಿ ಪಡೆದಿರುವ ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು. ಸಿನೆಮಾ ರೀಲ್ ನ ಮಣ್ಣಿನ ಹರಕೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಯಶ್ ಜೊತೆ ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ
ಐರಾ ಹಾಗೂ ಯಥರ್ವ್ ಇದ್ದರು. ಟಾಕ್ಸಿಕ್ ಚಲನಚಿತ್ರದ ನಿರ್ಮಾಪಕ ವೆಂಕಟ್ ಜೊತೆಗಿದ್ದರು.
ದಂಪತಿಗಳು ನೇರವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ತೆರಳಿ
ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು.