ಕಡಬ ಟೈಮ್ಸ್: ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಅವವ್ಯವಹಾರ ನಡೆದಿರುವ
ಬಗ್ಗೆ ದೂರುಗಳು ಬಂದ
ಹಿನ್ನೆಲೆ ದೇವಳದ ಕಾರ್ಯನಿರ್ವಾಹಕ
ಅಧಿಕಾರಿ ಅರವಿಂದ ಅಯ್ಯಪ್ಪ
ಶತಗುಂಡಿ ಕ್ರಮ
ಕ್ಕೆ ಮುಂದಾಗಿದ್ದಾರೆ.
ಸಿಸಿ ಕ್ಯಾಮಾರ ಅಳವಡಿಸಿರುವುದು |
ದೇಗುಲದ
ಆಡಳಿತಧಿಕಾರಿ , ಸಹಾಯಕ ಆಯುಕ್ತರೂ ಆಗಿರುವ ಜುಬಿನ್
ಮಾಹಾಪತ್ರ ಆದೇಶದ ಮೇರೆಗೆ ಕ್ರಮಕ್ಕೆ
ಮುಂದಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಲಡ್ಡು ಪ್ರಸಾದದ
ಬಗ್ಗೆ ಬಂದ ದೂರನ್ನು ಗಂಭೀರವಾಗಿ ಪರಿಗಣಿಸಿ ಲಾಡು ಪ್ರಸಾದ ನೀಡುವ ಕೌಂಟರ್ ಅಲ್ಲಿ ರಶೀದಿ ನೀಡಿದವರಿಗೆ ಮಾತ್ರ
ಪ್ರಸಾದ ನೀಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿಗಳು ಆದೇಶ ನೀಡಿದ್ದಾರೆ.
ಹಾಗೆಯೇ
ದೇಗುಲದ ನಾಲ್ಕು ಜನ
ಸಿಬ್ಬಂದಿಗಳಿಗೆ ನೋಟಿಸ್ ನೀಡಿ ವಿವರಣೆ ಕೇಳಿರುವುದಾಗಿ ತಿಳಿದು ಬಂದಿದೆ.
ಅವ್ಯವಹಾರ ಆಗಿರುವ
ಸ್ಥಳದಲ್ಲಿ ಹಾಗೂ
ಲಡ್ಡು ತಯಾರಿಕೆ
ಮಾಡುವ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಲಡ್ಡು
ಪ್ರಸಾದ
ತಯಾರಿಕೆ, ರಶೀದಿ ನೀಡುವಲ್ಲಿ, ಹಾಗೂ ಭಕ್ತರಿಗೆ ಪ್ರಸಾದ ನೀಡುವಲ್ಲಿ ಕಣ್ಗಾವಲು
ಇರಿಸಲಾಗಿದೆ. ಅವ್ಯವಹಾರ ಕಂಡುಬಂದಲ್ಲಿ ಸಂಬಂಧಪಟ್ಟವರ
ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ
ಅಧಿಕಾರಿ ಮಾದ್ಯಮಕ್ಕೆ ತಿಳಿಸಿದ್ದಾರೆ.