ಸವಣೂರು:
ಬಸ್ ನಿಲ್ಲಿಸಿಲ್ಲವೆಂದು ತಗಾದೆ ತೆಗೆದು
ಸರ್ಕಾರಿ ಬಸ್ ಚಾಲಕನ ಜೊತೆ ಉಡಾಫೆಯಾಗಿ ಮಾತಿಗಿಳಿದು ಹಲ್ಲೆಗೆ ಮುಂದಾದ ವ್ಯಕ್ತಿಯ ವಿರುದ್ದ
ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.23
ರಂದು ಕೆ.ಎಸ್.
ಆರ್.ಟಿ.ಸಿ. ಪುತ್ತೂರು
ಘಟಕದಲ್ಲಿ ಚಾಲಕನಾಗಿ
ಕರ್ತವ್ಯ ನಿರ್ವಹಿಸಿಕೊಂಡಿರುವ ಭರತ್ ಎಂಬವರು ಬಸ್ಸನ್ನು
ಚಲಾಯಿಸಿಕೊಂಡು ಕುದ್ಮಾರು ನಾನಿಲ ಎಂಬಲ್ಲಿಂದ ಪುತ್ತೂರು ಕಡೆಗೆ ಬರುತ್ತಿದ್ದರು.
ಈ
ವೇಳೆ ಮುಂಜಾನೆ ಸವಣೂರು
ಗ್ರಾಮದ ಸವಣೂರು ವಿದ್ಯಾರಶ್ಮಿ ಬಸ್
ನಿಲ್ದಾಣದ ಬಳಿಗೆ ತಲುಪಿದಾಗ ಬಸ್
ನಿಲ್ದಾಣದ ಬಳಿ 4ರಿಂದ 5 ಜನ ಸಾರ್ವಜನಿಕರು ನಿಂತುಕೊಂಡಿದ್ದು, ಸಾರ್ವಜನಿಕರು
ಬಸ್ಸನ್ನು ನಿಲ್ಲಿಸುವಂತೆ ಸೂಚನೆ ನೀಡದ ಕಾರಣ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿಕೊಂಡು
ಹೋಗಿದ್ದು, ಆ ವೇಳೆ ಫಿರ್ಯಾದುದಾರರು
ಚಲಾಯಿಸುತ್ತಿದ್ದ ಬಸ್ಸಿನ ನಿರ್ವಾಹಕ ನಿಲ್ಲಿಸುವಂತೆ ಸೂಚನೆ
ನೀಡಿದ್ದರು.
ಚಾಲಕ್
ಬಸ್ ನಿಲ್ದಾಣದಿಂದ
ಸ್ವಲ್ಪ ದೂರದಲ್ಲಿ ಬಸ್ಸನ್ನು ನಿಲ್ಲಿಸಿದ್ದು ಅಷ್ಟರಲ್ಲಿ ಬಸ್ ನಿಲ್ದಾಣದಲ್ಲಿದ್ದ
4-5 ಜನ ಸಾರ್ವಜನಿಕರು ಬಸ್ಸಿಗೆ ಹತ್ತಿದ್ದು, ಅವರಲ್ಲಿ ಒಬ್ಬರು
ಬಸ್ಸಿನ ಎದುರಿನ ಬಾಗಿಲಿನಲ್ಲಿ
ಹತ್ತಿ ಚಾಲಕ ಕುಳಿತುಕೊಂಡಿದ್ದ ಚಾಲಕನ ಸೀಟಿನ ಬಳಿಗೆ ಬಂದು “ನಿಕ್ಕ್ ಕಣ್ಣ್
ತೋಜುಜಾ? ಈ ಡ್ರೈವರಾ ಅತ್ತ್
ಹಜಾಮನಾ? ಈ
ಏತ್ ಸಮಯ ಆಂಡ್ ಡ್ಯೂಟಿಗ್ ಬತ್ತದ್? ನಿಕ್ಕ ಯಾನ್ ಏರ್ ಪಂದ್ ಗೊತ್ತಿಜ್ಜಾ?” ಎಂದು
ತುಳು ಭಾಷೆಯಲ್ಲಿ ಉಡಾಫೆಯಾಗಿ ಬೈದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಬಸ್ಸನ್ನು
ಚಲಾಯಿಸುವುದಿಲ್ಲ ಎಂದು ಹೇಳಿ ಬಸ್ಸನ್ನು
ಬದಿಗೆ ನಿಲ್ಲಿಸಿ ಚಾಲಕ ಬಸ್ಸಿನಿಂದ
ಕೆಳಗೆ ಇಳಿದಾಗ ವ್ಯಕ್ತಿಯು ಕೂಡಾ ಬಸ್ ನಿಂದ ಕೆಳಗೆ ಇಳಿದು ಚಾಲಕನ ಎಡ
ಕೈಯನ್ನು ಹಿಡಿದು ತಿರುಗಿಸಿ ಎಳೆದಾಡಿ ಕುತ್ತಿಗೆಯ
ಜಾಗಕ್ಕೆ ಕೈಯಿಂದ
ಗುದ್ದಿ, “ ನೀನು ಬಸ್ಸನ್ನು ಇಲ್ಲಿ ನಿಲ್ಲಿಸುವುದು ಬೇಡ ಪುತ್ತೂರುವರೆಗೆ ಚಲಾಯಿಸು” ಎಂದು ತಿಳಿಸಿರುವುದಾಗಿ
ದೂರಿನಲ್ಲಿ ಹೇಳಲಾಗಿದೆ.
ವ್ಯಕ್ತಿಯ
ಹಲ್ಲೆಯಿಂದ ಚಾಲಕನ್ ಎಡ ಕೈ
ಮತ್ತು ಕುತ್ತಿಗೆಯ ಭಾಗದಲ್ಲಿ ನೋವಾಗಿರುವುದರಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ
ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ
ನಡೆಸಿದ ವ್ಯಕ್ತಿಯ ಹೆಸರು ನಾರಾಯಣ
ಎಂಬುದಾಗಿ ತಿಳಿದು
ಬಂದಿದೆ.
ತಾನು
ಚಲಾಯಿಸುತ್ತಿದ್ದ ಬಸ್ಸನ್ನು ಬಸ್
ನಿಲ್ದಾಣದಲ್ಲಿ ನಿಲ್ಲಸದೇ ಸ್ವಲ್ಪ
ದೂರ ಹೋಗಿ ನಿಲ್ಲಿಸಿದ ಕಾರಣಕ್ಕೆ ವ್ಯಕ್ತಿಯು ಸಮವಸ್ತ್ರದಲ್ಲಿದ್ದ ತನಗೆ ಅವಾಚ್ಯ ಶಬ್ದಗಳಿಂದ
ಬೈದು ಕೈಯಿಂದ ಹಲ್ಲೆ
ನಡೆಸಿ, ಸಮವಸ್ತ್ರವನ್ನು ಹರಿದು, ಕರ್ತವ್ಯಕ್ಕೆ
ಅಡ್ಡಿಪಡಿಸಿದಾತನ ವಿರುದ್ಧ
ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ
. ಚಾಲಕನ್
ದೂರಿನಂತೆ ಪ್ರಕರಣ ದಾಖಲಾಗಿದೆ.