ಕಡಬ ಪ್ರಖಂಡ ಬಜರಂಗದಳದ ಸಂಯೋಜಕರಾಗಿ ನ್ಯಾಯವಾದಿ ಅಶ್ವಿತ್ ಕಂಡಿಗ ಹಾಗೂ ಸಹ ಸಂಯೋಜಕರಾಗಿ ದಯಾನಂದ ಅಡ್ಡಹೊಳೆ ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯು ಆ.2 ರಂದು ಪುತ್ತೂರಿನ ಶ್ರೀ ಗುರು ರಾಘವೇಂದ್ರ ಸಭಾಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಬೈಠಕ್ ನಲ್ಲಿ ನಡೆದಿದೆ.
ವಿಶ್ವ ಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಜವಾಬ್ದಾರಿ ಗಳನ್ನು ಘೋಷಿಸಿದರು .ಈ ಸಂದರ್ಭದಲ್ಲಿ ವಿ.ಹಿಂ.ಪ. ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಬಜರಂಗದಳದ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.