ಕಡಬ ಟೈಮ್ಸ್: ಕಡಬ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಯುವತಿಗೆ ಕೀಟಲೆ ನೀಡಿದ್ದು
ಪ್ರಯಾಣಿಕರು ಪ್ರಶ್ನಿಸಿದ ಕಾರಣ ಆತನನ್ನು ಆಟೋದಿಂದ ಅರ್ಧದಲ್ಲೇ ಇಳಿಸಿ ಹೋದ ಘಟನೆ ಕಡಬದಲ್ಲಿ ಆ.2 ರಂದು ಸಂಜೆ ನಡೆದಿದೆ.
ಕಡಬ-ಕೋಡಿಂಬಾಳಕ್ಕೆ ಹೋಗುವ ಸರ್ವಿಸ್ ಆಟೋದಲ್ಲಿ ಮಹಿಳಾ ಪ್ರಯಾಣಿಕರಿದ್ದರು.
ಆಟೋ ಸಂಚರಿಸುತ್ತಿದ್ದ ವೇಳೆ ಮದ್ಯದ ನಶೆಯಲ್ಲಿದ್ದ
ವ್ಯಕ್ತಿಯೊಬ್ಬ ಯುವತಿಗೆ ಕೀಟಲೆ ನೀಡಿದನ್ನು ಗಮನಿಸಿ ಮಹಿಳೆಯೊಬ್ಬರು ಆಟೋ ಚಾಲಕನಲ್ಲಿ ಪ್ರಶ್ನಿಸಿದ್ದಾರೆ.
ಆಟೋ ಚಾಲಕ ಯುವತಿಯ ಬಳಿ ವಿವರ ಕೇಳಿದ್ದಾಗ ಆತ ಅಸಭ್ಯವಾಗಿ ವರ್ತಿಸಿರುವುದನ್ನು
ತಿಳಿಸಿರುವುದಾಗಿ ತಿಳಿದು ಬಂದಿದೆ. ಮಹಿಳಾ ಪ್ರಯಾಣಿಕರ ಒತ್ತಾಯದ ಮೇರೆಗೆ ಆತನನ್ನು ಕಲ್ಲಂತಡ್ಕ
ಸಮೀಪ ಇಳಿಸಿ ಆಟೋ ಚಾಲಕ ಮುಂದೆ ಸಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಹಿಳಾ ಪ್ರಯಾಣಿಕೆಯೊಬ್ಬರು ಆಕ್ರೋಶ ಹೊರ ಹಾಕಿ ಮದ್ಯ ವಸನಿಗಳನ್ನು
ಮಹಿಳಾ ಪ್ರಯಾಣಿಕರ ಜೊತೆ ಆಟೋದಲ್ಲಿ ಹತ್ತಿಸಬಾರದೆಂದು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ .