Home ಪ್ರಮುಖ ಸುದ್ದಿ ಕಡಬ:ನೆರೆಪೀಡಿತ ಗ್ರಾಮೀಣ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಪುತ್ತೂರು ಸಹಾಯಕ ಆಯುಕ್ತರು

ಕಡಬ:ನೆರೆಪೀಡಿತ ಗ್ರಾಮೀಣ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಪುತ್ತೂರು ಸಹಾಯಕ ಆಯುಕ್ತರು

1
0

 ಕಡಬ: ಕಡಬ ತಾಲೂಕಿನ ನೆರೆಪೀಡಿತ ಗ್ರಾಮೀಣ ಪ್ರದೇಶಗಳಿಗೆ ಪುತ್ತೂರು
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

UNIC-KADABA


ನೆರೆ ಪೀಡಿತ ಪ್ರದೇಶಗಳಾದ ಇಚ್ಲಂಪಾಡಿ, ನೆಲ್ಯಾಡಿ ,  ಕಡಬ   ಪಟ್ಟಣ
ಪಂಚಾಯಿತಿ ವ್ಯಾಪ್ತಿಯ  ಸೈಂಟ್ ಆನ್ಸ್ ಶಾಲೆ ಹಿಂಭಾಗ
ಮಣ್ಣು ಕುಸಿಯುವ ದೂರು ಬಂದ ಹಿನ್ನೆಲೆಯಲ್ಲಿ,  ಕೊಡಿಂಬಾಳ
ಗ್ರಾಮದ ಮಡ್ಯಡ್ಕ ಅಪಾಯಕಾರಿ  ಮರ, ವಿದ್ಯುತ್ ಕಂಬ,
ಮಣ್ಣು ಕುಸಿದ ಸ್ಥಳ,    ಕಡಬ ಪೇಟೆಯಲ್ಲಿರುವ    ಅನುಗ್ರಹ ಸಭಾಭವನದ ಬಳಿಯಿರುವ ಅಪಾಯಕಾರಿ ಸ್ಥಳಗಳಿಗೆ‌
ಭೇಟಿ ನೀಡಿ ವೀಕ್ಷಿಸಿದರು.



GURUJI ADD

ಬಳಿಕ ಮಾಧ್ಯಮ ಮಿತ್ರರ ಜೊತೆ  ಮಾತನಾಡಿದ ಎಸಿಯವರು, ಕಡಬ ಭಾಗದಲ್ಲಿ ಇವರೆಗೆ
ನೆರೆಬಾಧಿತ ಪ್ರದೇಶದಲ್ಲಿ ಯಾವುದೇ  ಮನೆಗಳ ಸದಸ್ಯರನ್ನು
ಸ್ಥಳಾಂತರಿಸುವ  ಅಗತ್ಯತೆ ಕಂಡುಬಂದಿಲ್ಲ, ತೀರಾ ಅನಿವಾರ್ಯವಾದರೆ  ಮನೆ ಮಂದಿಯನ್ನು ಸ್ಥಳಾಂತರಿಸುವ ಕ್ರಮವನ್ನು ಈಗಾಗಲೇ ತಯಾರಾದ
ತಂಡ ಮಾಡಲಿದೆ. ಸ್ಥಳಾಂತರ ಸಂದರ್ಭ  ಸಾರ್ವಜನಿಕರು
ಸಹಕರಿಸಬೇಕು, ಅಪಾಯ ಸ್ಥಳಗಲ್ಲಿ ಜನರು ಒಡಾಟ ಮಾಡಬಾರದು,  ನೆರೆ ಬಂದ ಸಂದರ್ಬ ಸೇತುವೆಗಳ ಮೇಲೆ ನಿಂತು ಫೋಟೊ ಕ್ಲಿಕ್ಕಿಸುವಂತ
ದುಸ್ಸಾಸಕ್ಕೆ ಯಾರು ಮುಂದಾಗಬಾರದು. ಇಂತಹ ಸನ್ನಿವೇಶಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ
ಸೂಚಿಸಲಾಗಿದೆ ಎಂದರು.

ಅಲ್ಲದೆ ಕುಕ್ಕೆ ಸುಬ್ರಹ್ಮಣ್ಯ ಸಮೀಪ ನೂಚಿಲ ಎಂಬಲ್ಲಿ ಅಪಾಯ ಸ್ಥಿತಿಯಿಯಲ್ಲಿರುವ  8ಕುಟುಂಬಗಳಿಗೆ    ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಮರಗಳ ಕಡಿಯುವುದರಿಂದ
ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ ಹೀಗಾಗಿ ತೀರಾ ಅನಿವಾರ್ಯವಾದ ಅಪಾಯಕಾರಿ ಮರಗಳ ತೆರವಿಗೆ ಮತ್ತು
ಕೆಲವೊಂದು ಕಡೆ ಮರದ ಗೆಲ್ಲುಗಳ ತೆರವಿಗೆ ಮಾತ್ರ ಸೂಚಿಸಲಾಗಿದೆ ಎಂದರು. 

ತಾಲೂಕು ಕಚೇರಿಯಲ್ಲಿ 24  ಗಂಟೆ ಕಾರ್ಯಚರಿಸುವ ಕಂಟ್ರೋಲ್ ರೂಂ ತೆರಯಲಾಗಿದೆ. ಮೆಸ್ಕಾಂ,
ಪಟ್ಟಣ ಪಂಚಾಯತ್ ,ಕಂದಾಯ,ಪೊಲೀಸ್ ಇಲಾಖೆಯವರು ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿದ್ದಾರೆ. ಈಗಾಗಲೇ
ಭೇಟಿ ನೀಡಿದ ಸ್ಥಳಗಲ್ಲಿ ಕಂದಾಯ,  ಮೆಸ್ಕಾಂ, ಅರಣ್ಯ
ಇಲಾಖೆ ಸಂಬಂದಪಟ್ಟ ಸಮಸ್ಯೆಗಳಳಿಗೆ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಪುತ್ತೂರು ಎಸಿಯವರು ಆಗಮಿಸಿರುವುದನ್ನು ಕಂಡು ಗ್ರಾಮದ ಜನರು ಮೊದಲ ಸಲ ಉನ್ನತ ಮಟ್ಟದ ಅಧಿಕಾರಿಯವರು ಗ್ರಾಮದತ್ತ ಭೇಟಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ತಹಸೀಲ್ದಾರ್ ಪ್ರಭಾಕರ ಖಜೂರೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್,  ಮೆಸ್ಕಾಂ ಕಡಬ ಸಹಾಯಕ ಇಂಜಿನಿಯಾರ್    ಸಜಿ ಕುಮಾರ್, ಕಡಬ ಉಪ ವಲಯ ಅರಣ್ಯಾಧಿಕಾರಿ ಅಜಿತ್  , ಕಡಬ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಲೀಲಾವತಿ, ಸಿಬ್ಬಂದಿ  ಹರೀಶ್ ಬೆದ್ರಾಜೆ, ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ್
ಮನೋಹರ್ ಕೆ.ಟಿ, ಪುತ್ತೂರು ಸಹಾಯಕ ಅಯುಕ್ತರ ಕಚೇರಿ ಸಿಬ್ಬಂದಿ ಶೆರೀಫ್  ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here