ಕಡಬ ಟೈಮ್: ಕಡಬ/ಕೊಯಿಲ: ಪಶು ಸಂಗೋಪನ ಇಲಾಖೆಗೆ ಸೇರಿದ ಕೊಯಿಲ ಜಾನುವಾರು ತಳಿ ಸಂವರ್ಧನ ಕೇಂದ್ರದ ವಿಶಾಲವಾದ ಹುಲ್ಲುಗಾವಲಿನ
ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದೀಗ ಹಸುರು ಹುಲ್ಲು ಚಿಗುರಿ ಸುಂದರವಾಗಿ ಕಂಗೊಳಿಸುವ
ಇಲ್ಲಿನ ನಿಷೇಧಿತ ಪ್ರದೇಶದಲ್ಲಿ ರೀಲ್ಸ್ ಗಾಗಿ ಲಾರಿ ಡ್ರಿಫ್ಟಿಂಗ್ ನಡೆಸಿದ್ದು ಪ್ರಶ್ನಿಸಲು ಹೋದವರಿಗೆ ಹಲ್ಲೆಗೆ
ಮುಂದಾದ ಘಟನೆ ಬುಧವಾರ ನಡೆದಿರುವುದು ಬೆಳಕಿಗೆ ಬಂದಿದೆ.
ಘನ
ವಾಹನವನ್ನು ಹಸಿರು ಹುಲ್ಲಿನಿಂದ ಆವೃತವಾಗಿರುವ ಗುಡ್ಡದಲ್ಲಿ ಘನ ವಾಹನ ಕಂಡು ಸ್ಥಳೀಯರು ಸೇರಿದ್ದರು. ಪ್ರಶ್ನಿಸಲು
ಹೋದ ವ್ಯಕ್ತಿಯೊಬ್ಬರಿಗೆ ಹಲ್ಲೆಗೆ ಮುಂದಾಗಿ ಕೆಲ ಹೊತ್ತಿನ ಬಳಿಕ ಕೊಯಿಲದಲ್ಲಿ ಅಡ್ಡಗಟ್ಟಿ ಬೆದರಿಸಿರುವ
ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವುದಾಗಿ ತಿಳಿದು
ಬಂದಿದೆ.
ಈ ಹಿಂದೆ ಇಲ್ಲಿ ತ
ಮ್ಮ ಅಮಲಿನ ಚಾಳಿ ತೀರಿಸಿಕೊಳ್ಳಲು ಯುವಕರು ಇಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲಿ ಎಸೆದು ಪ್ರಕೃತಿಯ ಸೌಂದರ್ಯವನ್ನು ಕದಡುವ ಪ್ರಯತ್ನ
ಮಾಡಿದ್ದರು. ಅಲ್ಲದೆ ಯುವಕ–ಯುವತಿಯರು ತಮ್ಮ ಮೋಜು– ಮಸ್ತಿಗಾಗಿ ಈ ಕೇಂದ್ರವನ್ನು ಆರಿಸಿಕೊಳ್ಳುತ್ತಿದ್ದು, ಇವರ ಪುಂಡಾಟಿಕೆಯನ್ನು ಪ್ರಶ್ನಿಸುವ ಕೇಂದ್ರದ ಸಿಬ್ಬಂದಿಗಳ ಮೇಲೂ ಈ ಕಿಡಿಗೇಡಿಗಳು ಹಲ್ಲೆಗೆ ಮುಂದಾಗಿದ್ದರು.
ನಂತರದ ಬೆಳವಣಿಗೆಯಲ್ಲಿ ಇಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಳಾಗಿತ್ತು.
ಸ್ಥಳೀಯವಾಗಿ ಕೊಯಿಲ ಫಾರ್ಮ್ ಎಂದೇ ಕರೆಸಿಕೊಳ್ಳುವ ಈ ಪ್ರದೇಶ ಮಳೆಗಾಲದಲ್ಲಿ
ತಳಿ ಸಂವರ್ಧನ ಕೇಂದ್ರದ ಜಾನುವಾರುಗಳಿಗೆ ವಿಪುಲವಾದ ಹಸುರು ಹುಲ್ಲನ್ನು ಒದಗಿಸಿದರೆ ಬೇಸಗೆಯಲ್ಲಿ
ಯಥೇತ್ಛವಾಗಿ ಒಣ ಹುಲ್ಲು ಲಭಿಸುತ್ತದೆ.ಅನಧಿಕೃತವಾಗಿ ಗುಡ್ಡಕ್ಕೆ ಪ್ರವೇಶ ಮಾಡಿ ಅಲ್ಲಿ ಮೇಯುವ ಜಾನುವಾರುಗಳಿಗೆ,ಸ್ಥಳೀಯರಿಗೆ
ತೊಂದರೆ ಉಂಟುಮಾಡಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.