ಕಡಬ:
ಇಲ್ಲಿನ ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ
ಕಾಮಗಾರಿ
ವೇಳೆ ಶಾಲಾ ಕಟ್ಟಡ ಕುಸಿತಗೊಂಡು ನಾಲ್ವರು
ಮಕ್ಕಳು ಗಾಯಗೊಂಡಿರುವ ಘಟನೆ ಆ.27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ.
ಶಾಲಾ ಕಟ್ಟಡ ಕುಸಿತಗೊಂಡ ವೇಳೆ ಸೇರಿದ ಸ್ಥಳೀಯರು |
ಶಾಲಾ
ಕಟ್ಟಡದ ಪಕ್ಕದಲ್ಲೇ ಹಳೆಯ ಕಟ್ಟಡದ ಬಳಿ ಜೆಸಿಬಿ ಮೂಲಕ
ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಹಳೆಯ
ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ.
ಇದರಿಂದಾಗಿ
ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ
ಮಕ್ಕಳು ಆಟದ ಮೈದಾನಕ್ಕೆ ತೆರಳಿರುವುದರಿಂದ ಭಾರೀ ದುರಂತ ತಪ್ಪಿದೆ
. ಅಧಿಕಾರಿಗಳ
ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ