ಕಡಬ ಟೈಮ್: ಕೋಳಿ ಅಂಕ ಕಾನೂನು ಬಾಹಿರ ವಾಗಿದ್ದು, ಕೋಳಿ ಅಂಕ ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹ ಅಕ್ರಮ ಚಟುವಟಿಕೆಗಳು ನಡೆಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿನ ದ.ಕ ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದ್ದರು.
ಇದೀಗ
ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ರಾಜರೋಷವಾಗಿ ಕೋಳಿ ಅಂಕ ನಡೆದಿದ್ದು ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ
ಮಾಡಿದ್ದಾರೆ. ಅಲ್ಲದೆ ವಾಹನ ಸಹಿತ ಇಬ್ಬರನ್ನು ವಶಕ್ಕೆ
ಪಡೆದ ಬಗ್ಗೆ ವರದಿಯಾಗಿದೆ.
ಐತ್ತೂರು
ಗ್ರಾ.ಪಂ ವ್ಯಾಪ್ತಿಯ ಬೆತ್ತೋಡಿ ಎಂಬಲ್ಲಿ ರಬ್ಬರ್ ನಿಗಮದ ಜಾಗದಲ್ಲಿ ಈ ಕೋಳಿ
ಅಂಕ ನಡೆದಿದ್ದು ಖಚಿತ ಮಾಹಿತಿ ಮೇರೆಗೆ ಆ.19 ರ ಸಂಜೆ ಪೊಲೀಸರು ದಾಳಿ ಮಾಡಿರುವುದಾಗಿದೆ. ಅಪರಿಚಿತರು ಬಂದಾಗ ಕೋಳಿ ಅಂಕ ಮಾಡುವ ತಂಡಕ್ಕೆ ಮಾಹಿತಿ ನೀಡುವ
ಪ್ರತ್ಯೇಕ ಟೀಂ ಇದ್ದು ಪೊಲೀಸರು ಬರುವ ಸುಳಿವು ಸಿಕ್ಕಿ
ಎಲ್ಲರೂ ಕೋಳಿ ಜೊತೆಗೆ ಪರಾರಿಯಾಗಿದ್ದಾರೆ.
ಹಲವು ಮಂದಿ ರಬ್ಬರ್ ತೋಟದಲ್ಲಿ ಹಾಗೂ ಕಾಡು ಪ್ರದೇಶದತ್ತ ಜೀವದ ಹಂಗು ತೊರೆದು ಎದ್ದೂಬಿದ್ದು ಓಡಿ ಹೋಗಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ಲಭಿಸಿದೆ.
ಕೋಳಿ
ಅಂಕ ಆಯೋಜನೆ ಮಾಡಿರುವ ವ್ಯಕ್ತಿಯ ಅಂಗೈ ಗೆ ಕೋಳಿಗೆ ಕಟ್ಟುವ ಬಾಲ್ ತಾಗಿ ಗಾಯವಾಗಿದೆ ಎನ್ನಲಾಗುತ್ತಿದ್ದು ಕಡಬದ ಸರ್ಕಾರಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.
ಘಟನಾ
ಸ್ಥಳದಲ್ಲಿದ್ದ ನಾಲ್ಕು ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ.
ಅಲ್ಲದೆ ಇಬ್ಬರನ್ನು ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.
ಕೋಳಿ
ಅಂಕ ನಡೆಸಿದವರ ಪರ ಅಕ್ರಮ ಮರಳು ದಂಧೆಯ ರೂವಾರಿ ಮರ್ದಾಳದ
ವ್ಯಕ್ತಿಯೊಬ್ಬ ಸಂಧಾನಕ್ಕೆ ಠಾಣೆಗೆ ಬಂದರೂ ಪೊಲೀಸರು ಆತನಿಗೆ ಮಣೆ ಹಾಕಲಿಲ್ಲ ಎಂದು ತಿಳಿದು
ಬಂದಿದೆ.