Home ಪ್ರಮುಖ ಸುದ್ದಿ ಕಡಬ:ಏಕಾಏಕಿ ತಲೆತಿರುಗಿ ಬಿದ್ದು ಆಸ್ಪತ್ರೆ ದಾಖಲಾಗಿದ್ದ ಕಾಲೇಜು ವಿದ್ಯಾರ್ಥಿ ಮೃತ್ಯು

ಕಡಬ:ಏಕಾಏಕಿ ತಲೆತಿರುಗಿ ಬಿದ್ದು ಆಸ್ಪತ್ರೆ ದಾಖಲಾಗಿದ್ದ ಕಾಲೇಜು ವಿದ್ಯಾರ್ಥಿ ಮೃತ್ಯು

1
0

 ಕಡಬ: ಹಠಾತ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿಯೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

UNIC-KADABA


ಕಡಬ ತಾಲೂಕು ಕೊಯಿಲ ಗ್ರಾಮದ  ಗಂಡಿಬಾಗಿಲು ನಿವಾಸಿ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ.

GURUJI ADD



ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಈತ   ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದ ಎಂದು ತಿಳಿದು ಬಂದಿದೆ .


ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ಈತ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದ್ದು ಜೊತೆಗಿದ್ದ ಸ್ನೇಹಿತರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದ  ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಮೃತದೇಹವನ್ನು ಕಾಲೇಜಿಗೆ ತಂದು ಅಂತಿಮ ದರ್ಶನಕ್ಕಿಡಲಾಗಿತ್ತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here