ಕಡಬ ಟೈಮ್ಸ್: ಗೂಡ್ಸ್
ಟೆಂಪೋ ವಾಹನದಲ್ಲಿ ಅಕ್ರಮ
ದನಸಾಗಾಟ ಆಗುತ್ತಿರುವ ಬಗ್ಗೆ
ತಿಳಿದ ಸ್ಥಳೀಯರು
ವಾಹನ ತಡೆದು ಪೊಲೀಸರಿಗೆ
ಒಪ್ಪಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.
ಆ.19ರಂದು
ಈ ಘಟನೆ ನಡೆದಿದ್ದು ವಾಹನದಲ್ಲಿ ಒಂದು
ಹಸು ಮತ್ತು ಒಂದು ದನ ಇದ್ದು ಪಿರಿಯಾಪಟ್ಟಣ
ಕಡೆಗೆ ಕೊಂಡೆಯ್ಯುತ್ತಿದ್ದರು ಇಂದು ತಿಳಿದು ಬಂದಿದೆ. ಸುಳ್ಯ ಪೊಲೀಸರು ದನಸಾಗಾಟ ಮಾಡುತ್ತಿದ್ದವರನ್ನು ಮತ್ತು ವಾಹನವನ್ನು ಠಾಣೆಗೆ ತಂದು ವಿಚಾರಣೆ ನಡೆಸಿದ್ದರು.
ಈ
ಘಟನೆಗೆ ಸಂಬಂಧಿಸಿ ಸಾಕಿಮ್ ,ಜಮೀನ್ ಪಾಷಾ, ಸರ್ಪೂದ್ದೀನ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದಾಗ ಯಾವುದೇ ಪರವಾನಿಗೆ ಹೊಂದದೇ ಜಾನುವಾರು ಸಾಗಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಜಾನುವಾರು
ಹಾಗೂ ಸಾಗಾಟಕ್ಕೆ ಬಳಸಿದ ವಾಹನದೊಂದಿಗೆ ವಶಕ್ಕೆ ಪಡೆದು ಸುಳ್ಯ ಪೊಲೀಸರು ಅ.ಕ್ರ: 100/2024 ಕಲಂ:
5.7.12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ ಕಾಯ್ದೆ 2020 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.