ಕಡಬ ಟೈಮ್ಸ್: ರೈಲ್ವೇ
ಇಲಾಖೆಗೆ ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ
ರೈಲು ಓಡಿಸುವಂತೆ ದ.ಕ ಸಂಸದ ಬ್ರಿಜೇಶ್ ಚೌಟ ಅವರು ಮಾಡಿದ ಮನವಿಗೆ
ನೈರುತ್ಯ ರೈಲ್ವೇ ಇಲಾಖೆ ಸ್ಪಂಧಿಸಿದೆ.
ಗುಡ್ಡ
ಕುಸಿತದಿಂದ ಮಂಗಳೂರು–ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ಆದೇಶ ಹೊರಡಿಸಿದೆ.
ಶುಕ್ರವಾರ
ಹಾಗೂ ಶನಿವಾರದಂದು ತಲಾ ಒಂದು ಹಾಗೂ ಶನಿವಾರ ಹಾಗೂ ಭಾನುವಾರದಂದು ತಲಾ ಎರಡು ಹೆಚ್ಚುವರಿ ರೈಲು ಓಡಿಸುವ ಬಗ್ಗೆ ರೈಲ್ವೇ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಮಂಗಳೂರು
ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಿದ್ದು, ಮಳೆಯ ಕಾರಣ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದ ವಿಧಿಸಲಾಗಿದೆ. ಹೀಗಾಗಿ ಜನರ ಅಗತ್ಯತೆ ಪೂರೈಸಲು ಹೆಚ್ಚುವರಿ ರೈಲು ಓಡಿಸುವಂತೆ ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು.