Home ಪ್ರಮುಖ ಸುದ್ದಿ ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ ಆಫರ್ : ಬಾರ್ ಮಾಲಕನ ವಿರುದ್ಧ ಪ್ರಕರಣ...

ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ ಆಫರ್ : ಬಾರ್ ಮಾಲಕನ ವಿರುದ್ಧ ಪ್ರಕರಣ ದಾಖಲು

2
0

 ಕಡಬ ಟೈಮ್ಸ್:  ವಿದ್ಯಾರ್ಥಿಗಳು
ಮತ್ತು ಅಪ್ರಾಪ್ತ ವಯಸ್ಕರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಫರ್ಗಳ ಮೂಲಕ ಮದ್ಯ
ಸೇವನೆಯನ್ನು ಉತ್ತೇಜಿಸಲು ಹೊರಟಿದ್ದ ನಗರದ ದೇರೆಬೈಲ್ನಲ್ಲಿರುವ ರೆಸ್ಟೋರೆಂಟ್ ಲಾಲ್ ಬಾಗ್ ಇನ್ (ಲಿಕ್ವಿರ್ ಲಾಂಜ್ ಬಾರ್) ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

UNIC-KADABA

 

ಬಾರ್ನಲ್ಲಿ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಪಾರ್ಟಿಗೆ ಕಾವೂರು ಪೊಲೀಸರು ತಡೆಯೊಡ್ಡಿ, ಬಾರ್ ಮಾಲಕನಿಗೆ ನೋಟಿಸ್ ನೀಡಿದ್ದರು. ಬಳಿಕ ಅಬಕಾರಿ
ಇಲಾಖೆ ಎಚ್ಚೆತ್ತುಕೊಂಡು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

GURUJI ADD

ಸ್ಕೂಲ್
ಐಡಿ ತಂದರೆ ವಿದ್ಯಾರ್ಥಿಗಳಿಗೆ ಶೇ.15 ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟರ್ ವ್ಯವಸ್ಥೆ ಇದೆಯೆಂದು ಪಾರ್ಟಿ ಆಯೋಜಕರು ಆಫರ್ ನೀಡಿದ್ದರು. ಇದು ವಿದ್ಯಾರ್ಥಿಗಳನ್ನು ಮದ್ಯ ಸೇವನೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

ದೇರೆಬೈಲ್
ಬಾರ್ ಪ್ರಕರಣದಲ್ಲಿ ಮಾಲಕನಿಗೆ
ನೋಟಿಸ್ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಮಂಗಳೂರು
ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಬಾರ್ ಮತ್ತು ಪಬ್ಗಳಲ್ಲಿ ವಿದ್ಯಾರ್ಥಿಗಳಿಗೆ ಆಫರ್ ನೀಡಿ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ನಿಗಾ ವಹಿಸಲು ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here