ಸುಳ್ಯ
: ದ್ವಿಚಕ್ರ ವಾಹನಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಳ್ಯದ ಸುತ್ತುಕೋಟೆ ಎಂಬಲ್ಲಿ ಸಂಭವಿಸಿದೆ.
ದುಗಲಡ್ಕ ಮತ್ತು ಸೋಣಂಗೇರಿ ಮಧ್ಯೆ
ಸುತ್ತುಕೋಟೆ ಎಂಬಲ್ಲಿ
ಈ ಅಪಘಾತ ನಡೆದಿದ್ದು ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ
ರಾಮಚಂದ್ರ ಪ್ರಭು ಸ್ಥಳದಲ್ಲೇ ಮೃತಪಟ್ಟವರು.
ನೆಲ್ಲೂರು ಕೇಮ್ರಾಜೆಯಿಂದ ಸುಳ್ಯದತ್ತ
ಬರುತ್ತಿದ್ದಾಗ ಎದುರಿನಿಂದ ಸುಬ್ರಹ್ಮಣ್ಯಕ್ಕೆ
ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ರಸ್ತೆಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪಿದ್ದಾರೆ. ಇ ಸ್ಕೂಟರ್ ಮುಂಭಾಗ ಪೂರ್ಣ ಹಾನಿಯಾಗಿದೆ.