ಸುಬ್ರಹ್ಮಣ್ಯ : ಗುತ್ತಿಗಾರು ಸಮೀಪದ ನಾಲ್ಕೂರು ಗ್ರಾಮದ ಕಾಯರ್
ಮುಗೆರ್ ಎಂಬಲ್ಲಿ ಎರಡು ದಿನಗಳ ಹಿಂದೆ ಗಾಳಿ ಮಳೆಗೆ ಬಿದ್ದ ವಿದ್ಯುತ್ ಲೈನ್ ಹತ್ತಿರ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಇಬ್ಬರಿಗೆ ಗಾಯವಾದ ಘಟನೆ ಜುಲೈ 25 ರಂದು ವರದಿಯಾಗಿದೆ.
ಸುಂದರ
ಕಾಯರ್ ಮುಗೇರ್ ಅವರು ತಮ್ಮ ಜಾಗದೊಳಗಿನ ಮರ ಕಡಿಯುವಾಗ ಲೈನ್
ಮೆನ್ ಗಳು ವಿದ್ಯುತ್ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪರಿಣಾಮ ವಿದ್ಯುತ್ ಪ್ರವಹಿಸಿ ಸುಂದರ ಅವರಿಗೆ ಶಾಕ್ ಹೊಡೆದು ಬೊಬ್ಬೆ ಹೊಡೆದಿದ್ದಾರೆ.
ಇದನ್ನು
ಕೇಳಿ ಸ್ಥಳೀಯ ಮನೆಯ ಮಹಿಳೆಯೊಬ್ಬರು ಓಡಿ
ಬಂದಿದ್ದಾರೆ. ಆ ವೇಳೆ ವಿದ್ಯುತ್
ಲೈನ್ ತುಳಿದು ಮಹಿಳೆಯೂ
ಶಾಕ್ ಗೊಳಗಾಗಿದ್ದಾರೆ.
ತಕ್ಷಣ ಮಹಿಳೆಯ ಪತಿ ಯೋಗೀಶ್
ಎಂಬವರು ಬಂದು ವಿದ್ಯುತ್
ಶಾಕ್ ನಿಂದ ಬಿಡಿಸಿದ್ದಾರೆ.
ಇನ್ನು ಸುಂದರ ಅವರ ಕೈಯಲ್ಲಿ
ಗುಳ್ಳೆ ಬಂದಿರುವುದಾಗಿ ತಿಳಿದು ಬಂದಿದ್ದು ಗುತ್ತಿಗಾರು
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.