Home ಪ್ರಮುಖ ಸುದ್ದಿ ಸವಣೂರು ವ್ಯಾಪ್ತಿ:ರಸ್ತೆ ಅಗಲೀಕರಣಕ್ಕಾಗಿ ಅಗೆದ ಧರೆ ಕುಸಿತ: ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ

ಸವಣೂರು ವ್ಯಾಪ್ತಿ:ರಸ್ತೆ ಅಗಲೀಕರಣಕ್ಕಾಗಿ ಅಗೆದ ಧರೆ ಕುಸಿತ: ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ

1
0

 ಸವಣೂರು:
ಕಡಬ ತಾಲೂಕಿನ ಸವಣೂರು-ಬಂಬಿಲ- ಅಂಕತಡ್ಡ ರಸ್ತೆಯ ನಾಡೋಳಿ ಎಂಬಲ್ಲಿ ಮಳೆಗೆ ನಿರಂತರವಾಗಿ  ಧರೆ ಕುಸಿಯುತ್ತಿದ್ದು,
ಆತಂಕ ಹೆಚ್ಚಿದೆ.

UNIC-KADABA


ನಾಡೋಳಿಯಲ್ಲಿ
ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲೀಕರಣ ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ
ಸಲುವಾಗಿ ಬೃಹತ್  ಬರೆಯನ್ನು   ಅಗೆಯಲಾಗಿದ್ದು, ಈ ಬರೆ ಈಗ ಮಳೆಗಾಲದಲ್ಲಿ ದಿನೇ ದಿನೇ ಕುಸಿಯುತ್ತಿದೆ.


GURUJI ADD


ಧರೆಯ ಮೇಲೆ ವಿದ್ಯುತ್ ಕಂಬ ಹಾದು ಹೋಗಿದ್ದು, ಅದು ಕೂಡ ಈಗ ಕುಸಿಯುವ ಹಂತಕ್ಕೆ ತಲುಪಿದೆ. ರಸ್ತೆ ಅಗಲೀಕರಣ
ಹಾಗೂ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಮುಂದೆ ಬರುವ ಅಪಾಯಗಳ ಕುರಿತಾಗಿ ಸ್ಥಳೀಯರು ಗಮನಕ್ಕೆ ತಂದರೂ
ಯಾವುದೇ ಮುಂಜಾಗರೂಕತೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

 

ಭೂಮಿ ಕಳೆದುಕೊಂಡವರಿಗೆ ಯಾವುದೇ ಪರಿಹಾರವೂ ಸಿಕ್ಕಿಲ್ಲ.ಈಗ
ಉಳಿದ ಭೂಮಿಯು ಕುಸಿತವಾಗಿ ಕಳೆದುಕೊಳ್ಳುವಂತಾಗಿದೆ ಎಂದು ದೂರು ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here