ಕಡಬ/ಸವಣೂರು: ಇಲ್ಲಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ ಯುವಕನೊಬ್ಬ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಯುವಕ ಸರ್ವೆಯ ಗೌರಿ ಹೊಳೆಗೆ ಹಾರಿರುವ ಬಗ್ಗೆ ಸುದ್ದಿಯಾಗಿದ್ದು ಇದಕ್ಕೆ ಪೂರಕ ಎಂಬಂತೆ ಮೊಬೈಲ್,ಪರ್ಸ್ ಹೊಳೆ ಬದಿಯಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆತನ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಕುದ್ಮಾರು ಪರಿಸರದ ಯುವಕ
ಎನ್ನಲಾಗಿದ್ದು ಘಟನಾ ಸ್ಥಳದಲ್ಲಿ
ಸ್ಥಳೀಯರು ಸೇರಿದ್ದಾರೆ. ಮಳೆ ಹಿನ್ನೆಲೆ ಸರ್ವೆ ಹೊಳೆಯಲ್ಲಿ ಅಧಿಕ ನೀರಿದೆ. ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾನೆಯೇ ಎನ್ನುವ ಸಂಶಯವೂ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದಾರೆ. ಪೊಲೀಸರು ನಿನ್ನೆ ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿಸಲಾಗುವುದು.