ಸುಳ್ಯ: ಸಾಮಾನ್ಯವಾಗಿ ಆಹಾರ ಪದಾರ್ಥಗಳು ಇಲಿ ಪಾಲಾಗುವುದನ್ನು ಕೇಳಿದ್ದೇವೆ,ನೋಡಿದ್ದೇವೆ. ಆದರೆ ಶಾಲೆಯೊಂದರ ಬಿಸಿಯೂಟಕ್ಕೆ ತಂಡ ಆಹಾರ ಪದಾರ್ಥ ನಾಯಿಪಾಲಾದ ಘಟನೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯ ಸಮೀಪದ ಅಯ್ಯನಕಟ್ಟೆ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ
ಅಕ್ಷರ ದಾಸೋಹಕ್ಕಾಗಿ ಆಹಾರ ಪದಾರ್ಥಗಳನ್ನು ಶಿಕ್ಷಕರಿಲ್ಲದ ಸಮಯದಲ್ಲಿ ಏಜೆನ್ಸಿಯವರು ತಂದು ಹಾಕಿದ್ದು, ಅವುಗಳನ್ನು ಬೀದಿ ನಾಯಿಗಳು ರಾತ್ರಿ ವೇಳೆ ಚೆಲ್ಲಾಪಿಲ್ಲಿ ಮಾಡಿರುವುದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆಹಾರ
ಸಾಮಗ್ರಿ ಪೂರೈಸುವ ಸಿಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ಹಾಕಲು ಕಾರಣವೇನೆಂದು ಅಲ್ಲಿನವರು ಪ್ರಶ್ನಿಸುತ್ತಿದ್ದಾರೆ.
ಶಿಕ್ಷಕರು
ಅಥವಾ ಎಸ್.ಡಿ.ಎಂ.ಸಿ.ಗಾಗಲೀ ಯಾವುದೇ ಮಾಹಿತಿ ನೀಡದೆ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಜಗಲಿಯಲ್ಲಿ ಸಾಮಗ್ರಿಗಳನ್ನು ತಂದು ಹಾಕಿರುವುದಾಗಿ ತಿಳಿದು ಬಂದಿದೆ .ಈ
ಆಹಾರವನ್ನು ಮಕ್ಕಳಿಗೆ ಹೇಗೆ
ನೀಡುವುದು ಎಂದು ಶಾಲೆಯವರು ಪ್ರಶ್ನಿಸುತ್ತಿದ್ದಾರೆ.
ನಾಯಿಗಳು ಆಹಾರವನ್ನು ಚಲ್ಲಾಪಿಲ್ಲಿ ಮಾಡಿರುವುದನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ .