ಕಡಬ/ಬಿಳಿನೆಲೆ:
ಕೊಂಬಾರು ಗ್ರಾಮದ ಮನೆಯೊಂದರ ಅಂಗಳದಲ್ಲಿ ಇದ್ದಕ್ಕಿದ್ದಂತೆ ಮಣ್ಣು ಕುಸಿತವಾದ ಕಾರಣ ಆತಂಕಕ್ಕೆ ಒಳಗಾದ
ಘಟನೆ ವರದಿಯಾಗಿದೆ.
ಬಿಳಿನೆಲೆ
ವ್ಯಾಪ್ತಿಯ ಕೊಂಬಾರು ಗ್ರಾಮದ ಪೆರ್ದೊಂಡಿ ಯಾದವ ಗೌಡ
ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಇದ್ದಕ್ಕಿಂದಂತೆ
ಮಣ್ಣು ಕುಸಿತವಾಗಿ ಹೊಂಡದಂತಾಗಿ ಅತಂಕ ಉಂಟಾಗಿದೆ. ಸ್ಥಳಕ್ಕೆ ಅಗಮಿಸಿದ ಕೊಂಬಾರು ಗ್ರಾಮ ಪಂಚಾಯತ್
ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಮುಂಜಾಗೃತ
ಕ್ರಮವಾಗಿ ಮನೆಯನ್ನು ತೊರೆಯುವಂತೆ ಪಂಚಾಯಿತಿ ವತಿಯಿಂದ ನೊಟೀಸು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಿಯರು ಹೊಂಡ ನಿರ್ಮಾಣವಾದ ಸ್ಥಳಕ್ಕೆ ಪ್ಲಾಸ್ಟಿಕ್ ಟರ್ಪಾಲು ಹೊದಿಕೆ ಹಾಕಿ ಮಳೆ ನೀರು ಹೊಂಡಕ್ಕೆ
ಹರಿದು ಹೊಗದಂತೆ ವ್ಯವಸ್ಥೆ ಮಾಡಲಾಗಿದೆ.