ಕಡಬ: ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ,ನದಿ ತಡದ
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಇದೀಗ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕುಬಲಾಡಿ –ಪಂಜಳ ಪರಿಶಿಷ್ಠರ
ಕಾಲನಿಯಲ್ಲಿ ಮೂರು ಮನೆಗಳು ಜುಲೈ.30 ರಂದು ಜಲಾವೃತವಾಗಿರುವುದಾಗಿ
ವರದಿಯಾಗಿದೆ.
ಕಾಲನಿ ಪಕ್ಕ ಪೇರಡ್ಕ ಮೂಲಕ ಹಾದು ಹೋಗುವ ಸಣ್ಣ ಹೊಳೆಯಲ್ಲಿ ನೀರಿನ
ಪ್ರಮಾಣ ಅಧಿಕವಾಗಿ ಮನೆಗಳಿಗೆ ನೀರು ನುಗ್ಗಿದೆ. ಕಾಲನಿ
ನಿವಾಸಿಗಳಾದ ಪಕೀರ, ಅಕ್ಕು , ತನಿಯ ಎಂಬವರ ಮನೆಗಳು ಜಲಾವೃತವಾಗಿರುವುದಾಗಿದೆ.
ಕೆಲ ಮನೆ ಸಾಮಾಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿರುವುದಾಗಿ ತಿಳಿದು
ಬಂದಿದೆ. ಮಾಹಿತಿ ತಿಳಿದು ಕಂದಾಯ ಇಲಾಖೆಯ ಸಿಬ್ಬಂದಿಗಳು,ಗ್ರಾ.ಪಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ
ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಗ್ರಾ.ಪಂ ಸದಸ್ಯ ವಸಂತ ಕುಬಲಾಡಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಭಾಗದಲ್ಲಿ ತಡೆಗೋಡೆ
ನಿರ್ಮಾಣವಾದಲ್ಲಿ ಮಳೆಗಾಲದ ಈ ಸಮಸ್ಯೆಗೆ ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಈ ಬಗ್ಗೆ
ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.