Home ಪ್ರಮುಖ ಸುದ್ದಿ ಚಲಿಸುತ್ತಿದ್ದಾಗಲೇ ಟಯರ್ ಬ್ಲಾಸ್ಟ್‌; ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಕಾರು

ಚಲಿಸುತ್ತಿದ್ದಾಗಲೇ ಟಯರ್ ಬ್ಲಾಸ್ಟ್‌; ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಕಾರು

 ಕಡಬ ಟೈಮ್ಸ್, ಸುಳ್ಯ: ಮಳೆಗಾಲದಲ್ಲಿ ವಾಹನಗಳ ಅಪಘಾತ ಹೆಚ್ಚುತ್ತಿದೆ. ಇದೀಗ  ಟಯರ್
ಏಕಾಏಕಿ ಸಿಡಿದು  ಕಾರೊಂದು
ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದ ಘಟನೆ ಸುಳ್ಯದಿಂದ ವ್ರದಿಯಾಗಿದೆ.

UNIC-KADABA


ಜು.22ರಂದು ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಘಟನೆ ನಡೆದುದ್ದು  ಚಾಲಕ  ಅಪಾಯದಿಂದ
ಪಾರಾಗಿದ್ದಾರೆ.

 

GURUJI ADD

ಮಂಗಳೂರಿನಿಂದ
ಮಡಿಕೇರಿಯ ಕುಶಾಲನಗರಕ್ಕೆ ತೆರಳುತ್ತಿದ್ದ ಕುಶಾಲನಗರದ ಧನಂಜಯ ಎಂಬವರು ಚಲಾಯಿಸುತ್ತಿದ್ದ  ಕಾರು
ಕದಿಕಡ್ಕದ ತಲುಪುತ್ತಿದ್ದಂತೆ ಟಯರ್  ಸಿಡಿದು
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದಿದೆ .


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಆಗಮಿಸಿ ರಕ್ಷಣೆಗೆ ಧಾವಿಸಿ ಬಂದಿದ್ದಾರೆ.

LEAVE A REPLY

Please enter your comment!
Please enter your name here