Home ಪ್ರಮುಖ ಸುದ್ದಿ ಕಡಬ: ಸುಂಕದಕಟ್ಟೆ- ಕೊಂಬಾರು ಪ್ರಮುಖ ರಸ್ತೆಯಲ್ಲಿ ಘನ ವಾಹನದಲ್ಲಿ ರಬ್ಬರ್ ಮರ ಕಡಿದು...

ಕಡಬ: ಸುಂಕದಕಟ್ಟೆ- ಕೊಂಬಾರು ಪ್ರಮುಖ ರಸ್ತೆಯಲ್ಲಿ ಘನ ವಾಹನದಲ್ಲಿ ರಬ್ಬರ್ ಮರ ಕಡಿದು ಸಾಗಾಟ: ಇತ್ತೀಚೆಗಷ್ಟೇ ದುರಸ್ತಿಯಾದ ಈ ರಸ್ತೆ ಹಾಳಾಗುತ್ತಿದೆ-ಜನರ ಆಕ್ರೋಶ

2
0

 ಕಡಬ: ಎಡೆಬಿಡದೆ ನಿರಂತರವಾಗಿ ಸುರಿಯುವ ಮಳೆಯ ನಡುವೆಯೂ  ಘನ ವಾಹನದಲ್ಲಿ ರಬ್ಬರ್ ಮರ ಕಡಿದು ಸುಂಕದಕಟ್ಟೆ- ಕೊಂಬಾರು
ಪ್ರಮುಖ ರಸ್ತೆಯಲ್ಲಿ ಸಾಗಾಟ ಮಾಡುತ್ತಿದ್ದು ರಸ್ತೆ ಹಾನಿಯಾಗುತ್ತಿರುವುದಾಗಿ ಸಾರ್ವಜನಿಕರು ಆಕ್ರೋಶ
ಹೊರ ಹಾಕಿದ್ದಾರೆ.

UNIC-KADABA


ರಬ್ಬರ್ ಮಂಡಳಿಯ ಅಧೀನದಲ್ಲಿರುವ ರಬ್ಬರ್ ತೋಟದಿಂದ ಮರಗಳನ್ನು ಕಡಿದು
ಸಾಗಾಟ ಮಾಡಲಾಗುತ್ತಿದೆ.ಹೀಗಾಗಿ ಮಳೆಗಾಲದ ಮುನ್ನ ಸುಮಾರು 22 ಲಕ್ಷರೂ ವೆಚ್ಚದಲ್ಲಿ ದುರಸ್ತಿಯಾಗಿದ್ದ
ರಸ್ತೆ ಪೂರ್ತಿ ಹಾಳಾಗುವ ಹಂತಕ್ಕೆ ಬಂದು ತಲುಪಿದೆ.


GURUJI ADD



ತಾಲೂಕು  ಕೇಂದ್ರ
ಕಡಬವನ್ನು ಸಂಪರ್ಕಿಸಲು ಈ ಭಾಗದ ಜನರು ಇದೇ ರಸ್ತೆಯನ್ನು ಬಳಸುತ್ತಿದ್ದು ಘನ ವಾಹನಗಳನ್ನು ತಾತ್ಕಾಲಿಕವಾಗಿ
ನಿಷೇಧಿಸಬೇಕೆಂಬ ಕೂಗು ಕೇಳಿ ಬಂದಿದೆ. ಸೆಪ್ಟಂಬರ್ ವರೆಗೂ ಕಾಲಾವಕಾಶವಿದ್ದರೂ  ನಿರಂತರ ಸುರಿಯುವ ಮಳೆಯ ನಡುವೆ ರಬ್ಬರ್ ಮರ ಸಾಗಿಸುವ ಅನಿವಾರ್ಯತೆಯಾದರೂ
ಏನು ಎಂದು ಅಲ್ಲಿನ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮಳೆಗಾಲ ಕಳೆದು ಮರ ಸಾಗಿಸಲು ಹೇಳಿದರೂ ಗುತ್ತಿಗೆದಾರರು  ಕ್ಯಾರೇ  ಎನ್ನುತ್ತಿಲ್ಲವೆಂಬ
ಆರೋಪ ಸ್ಥಳೀಯರದ್ದಾಗಿದೆ.



ಕೊಂಬಾರು ಗ್ರಾ.ಪಂ ಆಡಳಿತ ಮಂಡಳಿ ಈ ವಿಚಾರವನ್ನು ಕಡಬ ತಹಶೀಲ್ದಾರ್
ಅವರ ಗಮನಕ್ಕೆ ತಂದಿದೆ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಕಡಬ ಟೈಮ್ ಗೆ ಮಾಹಿತಿ ನೀಡಿರುವ ತಹಶೀಲ್ದಾರ್
ಪ್ರಭಾಕರ ಖಜೂರೆ ಅವರು  ಗುತ್ತಿಗೆದಾರರನ್ನು   ಪೋನ್ ಮೂಲಕ
ಸಂಪರ್ಕಿಸಲು ಪ್ರಯತ್ನಿಸಿದ್ದು ಪೋನ್ ಸ್ವೀಕರಿಸಿಲ್ಲ. ಮಳೆ ಕಡಿಮೆ ಆಗುವವರೆಗೆ ಈ ರಸ್ತೆಯಲ್ಲಿ ಘನವಾಹನವನ್ನು
ಕೊಂಡೊಯ್ಯದಂತೆ  ಸಂಬಂಧಿಸಿದವರಿಗೆ  ಸೂಚನೆ ನೀಡಲಾಗುವುದು ಎಂದಿದ್ದಾರೆ.

LEAVE A REPLY

Please enter your comment!
Please enter your name here