ಕಡಬ:
ಮಳೆಯ ಹೆಚ್ಚಳದಿಂದ
ಕರೆಂಟ್ ಕಂಬದ ಮೇಲೆ ಮರ ಬೀಳುವುದು ಹಾಗೂ
ಇತರೆ ಯಾವುದೇ ಅನಾಹುತಗಳು ಸಂಭವಿಸಿದಾಗ ಜನರಿಗೆ ವಿದ್ಯುತ್ ಕಡಿತವಾಗದಂತೆ ಲೈನ್ ಮ್ಯಾನ್ ಪ್ರಾಣದ ಹಂಗು ತೊರೆದು ಮಳೆಯನ್ನು ಲೆಕ್ಕಿಸದೆ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಗಳನ್ನು ರಿಪೇರಿ ಮಾಡುತ್ತಿರುವಂತಹ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.
ಇದೀಗ ಕಡಬ ಮೆಸ್ಕಾಂ
ವ್ಯಾಪ್ತಿಯ ಕೋಡಿಂಬಾಳದಲ್ಲಿ ಲೈನ್ ಮ್ಯಾನ್ ಒಬ್ಬರು ಸಹಾಯಕರು ಇಲ್ಲದೆ ವಿದ್ಯುತ್ ಕಂಬವೇರಿ ಮಳೆಯ
ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ವಿಚಾರ ಜುಲೈ19ರಂದು ಕಂಡು ಬಂದಿದೆ.
ಮಳೆಗಾಲದ
ಸಂದರ್ಭದಲ್ಲಾದರೂ ಲೈನ್ ಮ್ಯಾನ್ ಗಳಿಗೆ ಸಹಾಯಕರನ್ನು ನೀಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಹಾಯಕರಿದ್ದಲ್ಲಿ ಸುಲಭವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ.ಯಾವುದಾದರೂ ಅನಾಹುತ ಅಥವಾ ಅವಘಡ ಆಗದಂತೆ ಸುಲಲಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದು ಒತ್ತಾಯವಾಗಿದೆ
ಟ್ರಾನ್ಸ್ಫಾರ್ಮರ್ ಏರಿ ಕೆಲಸ ಮಾಡುತ್ತಿರುವ ಕಡಬದ ಲೈನ್ ಮ್ಯಾನ್ |
ಮಳೆಗಾಲದ
ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುವ ಅನಿವಾರ್ಯತೆ ಎದುರಾಗುತ್ತಿದೆ. ಹೀಗೆ
ಕೆಲಸ ಮಾಡುವಾಗ ಕಡಬ ಮೆಸ್ಕಾಂಒ ಸೇರಿದಂತೆ ಸುತ್ತಮುತ್ತಲಿನ
ವ್ಯಾಪ್ತಿಯಲ್ಲಿ ಹಲವು ಲೈನ್ ಮ್ಯಾನ್ ಗಳು ವಿದ್ಯುತ್
ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.
ಲೈನ್
ಮ್ಯಾನ್ ಗಳು ಅವರ ಪ್ರಾಣವನ್ನು ಲೆಕ್ಕಿಸದೆ ಜನರಿಗೆ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಪ್ರಾಣದ
ಹಂಗು ತೊರೆದು ಕೆಲಸ ಮಾಡುವ ಲೈನ್ ಮೆನ್ ಸೇವೆಯನ್ನು ಗುರುತಿಸುವವರೆ ಕಡಿಮೆಯಾಗಿದೆ.