Home ಪ್ರಮುಖ ಸುದ್ದಿ ಕಡಬ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಭೇಟಿ

ಕಡಬ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಭೇಟಿ

ಕಡಬ: ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್( IPS) ಅವರು ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಠಾಣಾ ದಾಖಲಾತಿ, ಕಡತಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿ ಸಿಬ್ಬಂದಿಗಳಿಗೆ ಠಾಣಾ ಕರ್ತವ್ಯಗಳ ಕುರಿತು ಮಹತ್ವದ ಸೂಚನೆ ನೀಡಿದರು.
“ಕಡಬ ಟೈಮ್ಸ್”  ಜೊತೆ ಮಾತನಾಡಿದ ಎಸ್.ಪಿ ಯವರು ಠಾಣೆಗಳ ಪರಿಚಯದ ದೃಷ್ಟಿಯಿಂದ  ಭೇಟಿ ನೀಡಿದ್ದೇನೆ, ಠಾಣೆಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನ ಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ ಎಂದರು.