ಕಡಬ ಪಟ್ಟಣ: ಇಲ್ಲಿನ ಮಾಡ ದೈವಸ್ಥಾನ ಬಳಿ ಇರುವ ಆಟೊ ನಿಲ್ದಾಣದ ಮುಂಭಾಗದಲ್ಲಿ ಗಾಳಿಮಳೆಗೆ ಹಲಸಿನ ಮರದ
ಗೆಲ್ಲು ಮುರಿದು ಬಿದ್ದಿದೆ. ಇನ್ನು ಈ ಸೊಪ್ಪುಗಳನ್ನು ತಿನ್ನಲು ಬಿಕಾರಿ ಆಡುಗಳು ಮುಗಿಬಿದ್ದ ಪ್ರಸಂಗ ಜುಲೈ.26 ರಂದು ನಡೆದಿದೆ.
ಆಹಾರವಿಲ್ಲದೆ
ಅಲೆದಾಡುತ್ತಿದ್ದ ಆಡುಗಳಿಗೆ ಈ ಎಲೆಗಳು ಹಬ್ಬದ ವಾತಾವರಣ ಸೃಷ್ಟಿಸಿದೆ. ಇತ್ತೀಚೆಗೆ ರಸ್ತೆಯಲ್ಲಿ
ಅ ಲೆದಾಡುವ ಆಡುಗಳನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಿಡಿದು ಬಂಧಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದರು.
ಇದೀಗ
ಮತ್ತೆ ಆಡುಗಳ ಓಡಾಟ ಹೆಚ್ಚಾಗಿದ್ದು ಪಟ್ಟಣ ಪಂಚಾಯತ್ ಮತ್ತೆ ಆಡುಗಳನ್ನು ಹಿಡಿಯುತ್ತಾರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ ಆಡುಗಳು ಹಿಂಡಾಗಿ ಇರುವ ಪೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕ
ಸ್ಥಳಗಳಿಗೆ ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಸಾರ್ವಜನಿಕರಿಗೆ ಸಮಸ್ಯೆಯಾಗಲು ಕಾರಣವಾಗುವ ಆಡಿನ
ಮಾಲಿಕರ ವಿರುದ್ದ ಕ್ರಮ ಜರುಗಿಸಬೇಕೆಂಬ ಕೂಗು ಕೇಳಿಬಂದಿದೆ.