Home ಪ್ರಮುಖ ಸುದ್ದಿ ಕಡಬ: ಅಳಿವಿನ ಅಂಚಿನಲ್ಲಿರುವ ಪ್ರಾಣಿ ಬೇಟೆಯಾಡಿ ಸಿಕ್ಕಿಬಿದ್ದ ಆರೋಪಿಗಳಿಗೆ ಮಧ್ಯಂತರ ಜಾಮೀನು

ಕಡಬ: ಅಳಿವಿನ ಅಂಚಿನಲ್ಲಿರುವ ಪ್ರಾಣಿ ಬೇಟೆಯಾಡಿ ಸಿಕ್ಕಿಬಿದ್ದ ಆರೋಪಿಗಳಿಗೆ ಮಧ್ಯಂತರ ಜಾಮೀನು

 ಕಡಬ:
ಅಳಿವಿನ ಅಂಚಿನಲ್ಲಿರುವ ಪ್ರಾಣಿ ಬರ್ಕಾ(ಮೌಸ್ಡೀರ್‌) ಅನ್ನು ಕಡಬ ಸಮೀಪದ ಬಲ್ಯದಲ್ಲಿ ಬೇಟೆಯಾಡಿ
ಸಿಕ್ಕಿಬಿದ್ದು ಬಂಧನವಾಗಿದ್ದಆರೋಪಿಗಳಿಗೆ
ಪುತ್ತೂರು
ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ.

UNIC-KADABA


ಕಡಬ
ತಾಲೂಕಿನ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿ ಯಶೋಧರ ಗೌಡ ಎಂಬವರಿಗೆ ಸೇರಿದ ಜಾಗದ ತೆಂಗಿನ ತೋಟದಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಜು.22ರಂದು ಕಾರ್ಯಾಚರಣೆ ನಡೆಸಿದ್ದರು.


ಕೊಣಾಜೆ
ಗ್ರಾಮದ ಅಮ್ಮಾಜೆ ನಿವಾಸಿ ಹೇಮಂತ್(32.),  ಕಜಿಪಿತ್ತಲು
ನಿವಾಸಿ ವಿಜಯ್(33.) ಹಾಗೂ ಐತ್ತೂರು ಗ್ರಾಮದ ಬೆತ್ತೋಡಿ ನಿವಾಸಿ ಸಾಜಿ (50.)ಎಂಬವರನ್ನು ಬಂಧಿಸಿ
ಪುತ್ತೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
 

GURUJI ADD


ಪ್ರಕರಣದ
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.  ಸುಪ್ರಿಂ
ಮಾರ್ಗಸೂಚಿ
ಪ್ರಕಾರ
7 ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಿಗೆ ಸಿಆರ್ಪಿಸಿ 41 ಪ್ರಕಾರ ನೋಟಿಸ್
ನೀಡಿ ವಿವರಣೆ ಪಡೆದುಕೊಂಡು ಅಗತ್ಯವಿದ್ದಲ್ಲಿ ಆರೋಪಿಗಳನ್ನು ದಸ್ತಗರಿ ಮಾಡಬಹುದಾಗಿದೆ. ಆದರೆ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು
ಸುಪ್ರಿಂ ಕೋರ್ಟ್ ಮಾರ್ಗಸೂಚಿಯನ್ನು
ಪಾಲನೆ ಮಾಡದೇ ಇರುವುದರಿಂದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ.


ಅರಣ್ಯ
ಇಲಾಖೆ ಅಧಿಕಾರಿಗಳ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಕೊಣಾಜೆ ನಿವಾಸಿ ಪ್ರವೀಣ(40.) ಹಾಗೂ ತೋಟದ ಮಾಲೀಕ ಯಶೋಧರ ಗೌಡ(55.) ಅವರ ವಿರುದ್ಧವೂ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಗಳ ಪರ ನ್ಯಾಯವಾದಿ ಎಂ.ವೆಂಕಪ್ಪ ಗೌಡ ಸುಳ್ಯ ವಾದಿಸಿದ್ದರು.

LEAVE A REPLY

Please enter your comment!
Please enter your name here