ಕಡಬ: ಇಲ್ಲಿನ ಕಳಾರ ಬಳಿ ಹಳೆ ಮನೆಯೊಂದರಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಕಳಾರ ನಿವಾಸಿ ಮಹ್ಮಮದ್ ಶರೀಫ್ ಎಂಬವರು(33ವ.) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈ ಘಟನೆ ಜು.29ರಂದು ಬೆಳಕಿಗೆ ಬಂದಿದ್ದು ನಿಖರ ಕಾರಣ ತಿಳಿದು ಬಂದಿಲ್ಲ.
ಇಂದು ಬೆಳಿಗ್ಗೆ ಯುವಕನ್ನು ಹುಡುಕಾಡಿದ್ದಾಗ ಹಳೆ ಮನೆಯೊಂದರಲ್ಲಿ ಮೊಬೈಲ್ ರಿಂಗ್ ಆಗುತ್ತಿರುವುದು ಗೊತ್ತಾಗಿದೆ.
ಸ್ಥಳೀಯರು ಗಾಜು ಒಡೆದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.