ಕಡಬ/ರಾಮಕುಂಜ:
ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣವೊಂದನ್ನು ಪೊಲೀಸರು ಪತ್ತೆ
ಹಚ್ಚಿದ್ದು ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ್ದ
ಪಿಕ್‌ಅಪ್ ವಾಹನ ವಶಪಡಿಸಿಕೊಂಡಿದ್ದಾರೆ.
ಈ
ಘಟನೆ ಬುಧವಾರ ಸಂಜೆ ನಡ್ಡೆದಿದ್ದು ಕೊಯಿಲ ಶಾಖೆಪುರ ಕಡೆಯಿಂದ ಪಿಕ್‌ಅಪ್ ವಾಹನದಲ್ಲಿ ಎರಡು
ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸರು ವಾಹನವನ್ನು ಕೊಯಿಲದಲ್ಲಿ
ತಡೆದಿದ್ದಾರೆ.
ಈ ಹೋರಿಗಳನ್ನು ಮನೆಯೊಂದರಲ್ಲಿ ನಡೆಯುವ ಅಕ್ರಮ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.ಕಡಬ
ಎಸ್.ಐ ಅಭಿನಂದನ್ ಅವರ ನಿರ್ದೇಶನದಲ್ಲಿ ಹೆಡ್‌ಕಾನ್‌ಸ್ಟೇಬಲ್ ಹರೀಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ವಾಹನದಲ್ಲಿದ್ದ ರಾಮಕುಂಜ ಗ್ರಾಮದ ನೀರಾಜೆ ನಿವಾಸಿಗಳಾದ ಸಿರಾಜ್ ಮತ್ತು ಆತನ ಸಹೋದರ ಜಾಬಿರ್ ಎಂಬವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಿಕ್‌ಅಪ್ ವಾಹನ ಹಾಗೂ ಹೋರಿಗಳನ್ನು ವಶಪಡಿಸಿಕೊಂಡಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.