ಕಡಬ ಟೈಮ್ಸ್(KADABA TIMES):ಬೆಳ್ಳಾರೆ: ಪ್ರಕರಣವೊಂದರ ವಿಚಾರಣೆಗೆಂದು ಠಾಣೆಗೆ ಕರೆಸಿ,ವಿನಃ ಕಾರಣ ಬೆತ್ತಲೆಗೊಳಿಸಿ ಬೆಳ್ಳಾರೆ ಠಾಣಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವೀಡಿಯೋ ಮೂಲಕ ಸಹಾಯಾಸ್ತ ಕೇಳಿದ್ದ ಯುವಕ ಇಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ನೋವನ್ನು ಹಂಚಿಕೊಂಡ ಯುವಕನ ಹೆಸರು ಅಜಿತ್ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಯುವಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದ್ಯದ ವಿಚಾರದಲ್ಲಿ ಯುವಕನಿಗೂ ಆತನನಿಗೂ ವಾಗ್ವಾದ ನಡೆದು ಬಳಿಕ ಠಾಣೆ ಮೆಟ್ಟಿಲೇರುವುದಾಗಿ ತಿಳಿದು ಬಂದಿದೆ.ಈ ಸಂದರ್ಭ ಪೊಲೀಸರು ಹಲ್ಲೆ ಮಾಡಿರುವುದನ್ನು ಯುವಕ ವೀಡಿಯೋ ಮೂಲಕ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಸದ್ಯ ಈ ಘಟನೆಗೆ ಸಂಬಂಧಿಸಿ ಮೇಲಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.