ಕಡಬ ಟೈಮ್ಸ್(KADABA TIMES):ಸುಳ್ಯದ ಪೈಚಾರು ಬಳಿ ಯುವಕರ ನಡುವೆ ಹೊಡೆದಾಟವಾಗಿ ಕಾರು ಜಖಂಗೊಳಿಸಿದ ಘಟನೆ ಭಾನುವಾರ ನಡೆದಿದೆ.
ಯುವಕನೊಬ್ಬ ಶಾಲಾ ಬಾಲಕಿಯೊಬ್ಬಳನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆತಂದನೆಂದೂ, ಇದನ್ನು ವಿರೋಧಿಸಿ ಮತ್ತೋರ್ವ ಮತ್ತು ಮನೆಯವರು ರಿಕ್ಷಾ ಚಾಲಕನಿಗೂ, ಕರೆತಂದ ಯುವಕನಿಗೂ ಹಲ್ಲೆ ನಡೆಸಿದರೆಂದೂ ಹೇಳಲಾಗಿದೆ.
ಎರಡೂ ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಎರಡೂ ಕಡೆಯವರೂ ಭಜರಂಗದಳದಲ್ಲಿ ಗುರುತಿಸಿಕೊಂಡಿರುವುದರಿಂದ ಭಜರಂಗ ದಳದ ಮುಖ್ಯ ಪದಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಿರುವುದಾಗಿ ತಿಳಿದುಬಂದಿದೆ.
ರಕ್ಷಿತ್ ಎಂಬ ಯುವಕನ ಮೇಲೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.