ಕಡಬ ಟೈಮ್ಸ್(KADABA TIMES):ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳ ರಾಜ್ಯಾದಾದ್ಯಂತ ಭಾನುವಾರವಾರ ಲಾಕ್‌ಡೌನ್ ಘೋಷಿಸಲಾಗಿದ್ದು, ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ತಪಾಸಣೆ ನಡೆಸಲು ಪೊಲೀಸರಿಗೆ ಆದೇಶ ನೀಡಲಾಗಿದೆ. ನಿರ್ಬಂಧ ಉಲ್ಲಂಘಿಸುವವರ ವಿರುದ್ದ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗುವುದು.
ಇನ್ನು ವ್ಯಾಪಾರ ಮಳಿಗೆಗಳು ರಾತ್ರಿ 9 ಗಂಟೆ ತನಕ ತೆರೆಯಬಹುದು. ಹೋಟೆಲ್, ಹಣ್ಣು ಹಂಪಲು, ಸರಕು ಸಾಮಾಗ್ರಿ, ಹಾಲು, ಮೀನು, ಮಾಂಸದ ಅಂಗಡಿಗಳು ರಾತ್ರಿ 9 ಗಂಟೆ ತನಕ ತೆರೆಯ ಬಹುದು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ . ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.