Home ಪ್ರಮುಖ ಸುದ್ದಿ ಡಿಕೆಶಿ ಮನೆ ಮೇಲೆ CBI ದಾಳಿ ರಾಜಕೀಯ ಪ್ರೇರಿತ-ಟಿ.ಎಂ. ಶಹೀದ್ ಆರೋಪ

ಡಿಕೆಶಿ ಮನೆ ಮೇಲೆ CBI ದಾಳಿ ರಾಜಕೀಯ ಪ್ರೇರಿತ-ಟಿ.ಎಂ. ಶಹೀದ್ ಆರೋಪ

ಕಡಬ ಟೈಮ್ಸ್ (KADABA TIMES):ಡಿ.ಕೆ.ಶಿವಕುಮಾರ್ ಮನೆ ಸೇರಿದಂತೆ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಸಿ.ಬಿ.ಐ. ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು  ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ಆರೋಪಿಸಿದ್ದಾರೆ.

UNIC-KADABA

ಸೋಮವಾರ  ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪ ಚುನಾವಣೆ ಯಲ್ಲಿ ಸೋಲಿನ ಭೀತಿ ಬಿಜೆಪಿ ಸರಕಾರವನ್ನು ಕಾಡಲಾರಂಭಿಸಿದೆ. ಏನಾದರೂ ಮಾಡಿ ಡಿ.ಕೆ.ಶಿ.ಯವರ ಪ್ರಭಾವ ಕುಗ್ಗಿಸಬೇಕೆಂಬ ನಿಟ್ಟಿನಲ್ಲಿ ಈ ರೀತಿಯ ಕುತಂತ್ರವನ್ನು ಸರಕಾರ ಮಾಡುತ್ತಿದೆ. ಇ.ಡಿ., ಸಿ.ಬಿ.ಐ.,ಪ ಐ.ಟಿ. ಸಂಸ್ಥೆಗಳನ್ನು ತಮ್ಮ ದಾಳಕ್ಕೆ ಬಳಸಿಕೊಳ್ಳುತ್ತಿರುವ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಳಿಸುತ್ತಾರೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಈ ಕ್ರಮವನ್ನು ಖಂಡಿಸುವುದಾಗಿ ಹೇಳಿದರು.ಇದೇ ವೇಳೆ ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದ ಸರಕಾರ ಇರುವ ರಾಜ್ಯದಲ್ಲಿ ಮಹಿಳೆಯ ಅತ್ಯಾಚಾರ ನಡೆದು, ಕೊಲೆಯಾಗಿದೆ. ಹೀಗಿದ್ದರೂ ಇದನ್ನು ಪ್ರತಿಭಟಿಸಬೇಕಾದ ಬಿಜೆಪಿ ಮಹಿಳೆಯರು ಎಲ್ಲಿದ್ದಾರೆ. ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

GURUJI ADD

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಎಂ.ಜೆ., ಎಸ್.ಸಂಶುದ್ದೀನ್, ಸಚಿನ್ ರಾಜ್ ಶೆಟ್ಟಿ, ಡೇವಿಡ್ ಧೀರಾ ಕ್ರಾಸ್ತ, ಭವಾನಿಶಂಕರ್ ಕಲ್ಮಡ್ಕ ಇದ್ದರು.

LEAVE A REPLY

Please enter your comment!
Please enter your name here