ಕಡಬ ಟೈಮ್ಸ್ (KADABA TIMES):ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನದ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು ಇದರ ಸದಸ್ಯರಿಂದ ಇಲ್ಲಿನ ಪ್ರಾಥಮಿಕ ಶಾಲೆಯ ಸಮೀಪ ಶ್ರಮದಾನ ಮಾಡಲಾಯಿತು.
ಬಳಿಕ ಕಾಣಿಯೂರಿನ ಬಸ್ ನಿಲ್ದಾಣವನ್ನು ಸ್ವಚ್ಚಗೊಳಿಸಲಾಯಿತು .
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಜಯಂತ ಅಬೀರ,ಕಾರ್ಯದರ್ಶಿ ವಿನಯ್ ಎಲುವೆ,ಜತೆ ಕಾರ್ಯದರ್ಶಿ ರಾಜೇಶ್ ಮೀಜೆ, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಪರಮೇಶ್ವರ ಅನಿಲ,ರಚನ್ ಬರಮೇಲು,ಪುನೀತ್ ಕಲ್ಪಡ, ಕಾಣಿಯೂರು ಗ್ರಾ.ಪಂ. ಮಾಜಿ ಸದಸ್ಯ ರಾಮಣ್ಣ ಗೌಡ ಮುಗರಂಜ,ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪದ್ಮನಾಭ ಗೌಡ ಗುಂಡಿಗದ್ದೆ, ರಾಧಾಕೃಷ್ಣ ಗೌಡ ಕಂಪ,ವಸಂತ ಪೆರ್ಲೋಡಿ,ಮೋಹಿತ್ ಪೆರ್ಲೋಡಿ, ಚೆನ್ನಪ್ಪ ಗೌಡ ಕಲ್ಪಡ,ಸವಿನ್ ಕಾಣಿಯೂರು,ನವೀನ್ ಕೊಲ್ಯ,ರಘು ಪುಣ್ಚತ್ತಾರು,ಕಾರ್ತಿಕ್ ಮಾದೋಡಿ ಭಾಗವಹಿಸಿದ್ದರು.