Home ಪ್ರಮುಖ ಸುದ್ದಿ ಅಡ್ಡಬೈಲ್-ಬೀದಿಗುಡ್ಡೆ ರಸ್ತೆ ದುರಸ್ತಿ ವಿಚಾರ | ಏಕಮನಸ್ಕರಾಗಿ ಹೋರಾಟಕ್ಕೆ ಇಳಿದ ನಾಗರಿಕರು

ಅಡ್ಡಬೈಲ್-ಬೀದಿಗುಡ್ಡೆ ರಸ್ತೆ ದುರಸ್ತಿ ವಿಚಾರ | ಏಕಮನಸ್ಕರಾಗಿ ಹೋರಾಟಕ್ಕೆ ಇಳಿದ ನಾಗರಿಕರು

ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಆದರ್ಶ ಗ್ರಾಮದ ಬಳ್ಪದ ಅಡ್ಡಬೈಲ್-ಬೀದಿಗುಡ್ಡೆ ಪರಿಸರದ ನಾಗರಿಕರು ಏಕಮನಸ್ಕರಾಗಿ ಭಾನುವಾರ ಮತ್ತೆ  ರಸ್ತೆ  ತುರ್ತು ದುರಸ್ತಿ ಮತ್ತು ಶಾಶ್ವತ ರಸ್ತೆ ಕಾಮಗಾರಿ ಕುರಿತಾಗಿ ಹೋರಾಟ ಮುಂದುವರಿಸಿದ್ದಾರೆ.

UNIC-KADABA

ಇದೀಗ  ತುರ್ತಾಗಿ ಶಾಸಕರನ್ನು ಭೇಟಿ ಮಾಡುವ ಬಗ್ಗೆ ಹಾಗೂ  ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಗ್ರಾಮದ ರಸ್ತೆಗಳ ಪರಿಸ್ಥಿತಿಯ ಪುರಾವೆಯೊಂದಿಗೆ ಮನವಿ ಸಲ್ಲಿಸುವುದಾಗಿ ತೀರ್ಮಾನಿಸಿದ್ದಾರೆ.

ಕಳೆದ ಸೆ. 27ರಂದು ಈ ಭಾಗದ  ನಾಗರಿಕರು ಸಭೆ ನಡೆಸಿ ಹೋರಾಟ ಸಮಿತಿ ರಚಿಸಿಕೊಂಡಿದ್ದರು. ರಸ್ತೆ ಕಾಮಗಾರಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸುಳ್ಯ ಶಾಸಕರು ಮತ್ತು ಕಡಬ ತಹಶೀಲ್ದಾರರಿಗೆ ಅಂಚೆ ಮೂಲಕ ಮನವಿ ಪತ್ರವನ್ನು ರವಾನಿಸಿದ್ದರು.  ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಖುದ್ದು ಮನವಿ ಸಲ್ಲಿಸಿದ್ದರು. ಜಿ.ಪಂ ನಿಂದ  ಮಾಹಿತಿ ಹಕ್ಕು ಮೂಲಕ ಕಳೆದ 20ವರ್ಷಗಳಿಂದ ಈ ರಸ್ತೆಗೆ ಬಿಡುಗಡೆಯಾದ ಅನುದಾನದ ಮಾಹಿತಿಗಾಗಿ ಅರ್ಜಿಯನ್ನೂ ಸಲ್ಲಿಸಿದ್ದರು.

GURUJI ADD

ಭಾನುವಾರದ ನಡೆದ  ಸಭೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ, ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ, ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ, ಬೀದಿಗುಡ್ಡೆ ಅಂಗಡಿ ಮಾಲಕರ ಸಂಘ ಹಾಗು ಹಿಂದೂ ಜಾಗರಣ ವೇದಿಕೆಯ ಸದಸ್ಯರು  ಬೆಂಬಲ ಸೂಚಿಸಿದ್ದರು.  ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿಯ ಅಧ್ಯಕ್ಷ  ಗೋಪಾಲಕೃಷ್ಣ ಗೌಡ ದರ್ಖಾಸು ವಹಿಸಿದ್ದರು. ಎಲ್ಲಾ ಸಂಘಟನೆಗಳ ಸದಸ್ಯರು ,ಊರವರು ಈ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here