ಕಡಬ ಟೈಮ್ಸ್, ಉದ್ಯೋಗ ಮಾಹಿತಿ: 2021-22ನೇ ಸಾಲಿನ ಕ್ಲರಿಕಲ್ ಕೇಡರ್‌ನ ವಿವಿಧ ಹುದ್ದೆಗಳ ಮುಂದಿನ ನೇಮಕಾತಿ ಪ್ರಕ್ರಿಯೆಗಾಗಿ ಐಬಿಪಿಎಸ್ ಅಧಿಸೂಚನೆ ಪ್ರಕಟಿಸಿದೆ.ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಆಯ್ಕೆ ಪ್ರಕ್ರಿಯೆ : ಪ್ರಿಲಿಮಿನರಿ ಪರೀಕ್ಷೆ, ಮೈನ್ಸ್ ಪರೀಕ್ಷೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆಯು 100 ಅಂಕಗಳನ್ನು ಹೊಂದಿದ್ದು 1 ಗಂಟೆ ಅವಧಿಯದ್ದಾಗಿದೆ. ಮೈನ್ಸ್ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು, 2ಗಂಟೆ 40 ನಿಮಿಷಗಳ ಅವಧಿಯದ್ದಾಗಿದೆ. ಈ ಪರೀಕ್ಷೆ 24.01.2021ರಂದು ಮೂಲಕ ನಡೆಯಲಿದೆ.
ಪ್ರಶ್ನೆಗಳು: ಆಬ್ಜೆಕ್ಟಿವ್ ಪರೀಕ್ಷೆಯು 200 ಅಂಕಗಳ 200 ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 50 ಪ್ರಶ್ನೆಗಳ 4 ವಿಭಾಗಗಳನ್ನು ಒಳಗೊಂಡಿರುತ್ತವೆ.
1,558 ಹುದ್ದೆಗಳು : ಒಟ್ಟು 1,558 ಕ್ಲರಿಕಲ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಹುದ್ದೆಗಳು ಪೂರ್ಣಾವಧಿಯದಾಗಿದ್ದು, ಮಾಸಿಕ 20,000- 39,992ರೂ. ವೇತನವನ್ನು ಹೊಂದಿದೆ.
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಸಿಒ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಪಂಜಾಬ್, ಸಿಂಧ್ ಬ್ಯಾಂಕ್ ಗಳಿಗೆ ನೇಮಕವಾಗಲಿದೆ.
ಅರ್ಹತೆಗಳು :ಭಾರತ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವು ದಾದರೂ ಪದವಿ ಪಡೆದಿರಬೇಕು. ಅಧಿಕೃತ ಅಂಕ ಪಟ್ಟಿ ಅಥವಾ ಪದವಿ ಸರ್ಟಿಫಿಕೆಟ್ ಕಡ್ಡಾಯ.
ವಯೋಮಿತಿ:: ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು. ಅರ್ಜಿ ಸಲ್ಲಿಸಲು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 8 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ https://ibpsonline.ibps.in/crpcl10aug20/