ಕಡಬ ಟೈಮ್ಸ್ (KADABA TIMES):ಡೆಬಿಟ್ /ಕ್ರೆಡಿಟ್ ಕಾರ್ಡ್ ಬಳಕೆಗೆ ಸಂಬಂಧಪಟ್ಟಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟಂಬರ್ 30ರಿಂದ ಈ ಹೊಸ ನಿಯಮ ಗಳು ಜಾರಿ ಮಾಡಲಿದೆ. ಅಂತಾ ರಾಷ್ಟ್ರೀಯ ವ್ಯವಹಾರ, ಕಾರ್ಡ್ ರಹಿತ ವ್ಯವಹಾರ, ಆನ್‌ಲೈನ್ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾವಣೆ ಮಾಡಿದ್ದು, ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ.
ಈ ಹೊಸ ನಿಯಮಗಳ ಪ್ರಕಾರ ಗ್ರಾಹಕರು ತಮ್ಮಗೆ ಅಗತ್ಯವಿರುವ ಸೇವೆಗೆ ಅರ್ಜಿ ಸಲ್ಲಿಸಬೇಕಾಗಿದ್ದು, ತಮ್ಮ ಆದ್ಯತೆಗೆ ಒಳಗೊಂಡಂತೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಯಲ್ಲಿ ಗ್ರಾಹಕರು ಆಯ್ಕೆ ಮಾಡಿ ಕೊಂಡ ಸೇವೆಗಳನ್ನು ಮಾತ್ರ ಬ್ಯಾಂಕ್‌ಗಳು ನೀಡಲಿದ್ದು, ಅಂತಾರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್ ವಹಿವಾಟು ಗಳ ಅಗತ್ಯತೆ ಇದೆ ಎಂದಾದರೆ ಅಂತಹ ಸೇವೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸುವಾಗ ಗ್ರಾಹಕರು ದೇಶೀಯ ವಹಿವಾಟಿಗೆ ಆದ್ಯತೆ ನೀಡಬೇಕು ಎಂದು ಆರ್‌ಬಿಐ ತಿಳಿಸಿದ್ದು, ತಮ್ಮಗೆ ಅಗತ್ಯವಿದ್ದರೆ ಮಾತ್ರ ವಿದೇಶಿ ವ್ಯವಹಾರಗಳು ಹಾಗೂ ಪಿಒಎಸ್ ಟರ್ಮಿನಲ್‌ನ ಮೂಲಕ ನಡೆಸಲಾಗುವ ವಹಿವಾಟುಗಳ ಸೌಲಭ್ಯವನ್ನು ಪಡೆಯುವಂತೆ ಸೂಚಿಸಿದೆ.
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ ಮತ್ತು ಸ್ಥಗಿತ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.
ಹೊಸ ನಿಯಮಗಳನ್ನು ಅನುಸರಿಸಿ ಗ್ರಾಹಕರು ತಾವೇ ಸ್ವತ: ವಹಿವಾಟಿನ ಮಿತಿಯನ್ನು ಸಹ ಬದಲಾಯಿಸಲು ಅನುವು ಮಾಡಿಕೊಡಲಾಗಿದೆ. ಮೊಬೈಲ್ ಅಪ್ಲಿಕೇಶನ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಯಂತ್ರ ಮತ್ತು ಐವಿಆರ್ ಮೂಲಕ ಕಾರ್ಡ್‌ನ ಮಿತಿಯನ್ನು ಬದಲಾಯಿಸಬಹುದು. ಇದರೊಂದಿಗೆ ಗ್ರಾಹಕರಿಗೆ ತಮ್ಮ ಎಟಿಎಂ ಕಾರ್ಡ್ ವಹಿವಾಟುವಿನ ಮಿತಿಯನ್ನು ನಿರ್ಧಾರಿಸುವ ಸೌಲಭ್ಯವನ್ನು ನೀಡಲಾಗಿದ್ದು, ಮೊಬೈಲ್ ಅಪ್ಲಿಕೇಷನ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂಗಳು, ಐವಿಆರ್ ಅಥವಾ ಇಂಟರಾಕ್ಟೀವ್ ವಾಯ್ಸ ಮೊದಲಾದವುಗಳನ್ನು ನಿವಾರಿಸಲು 24×7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ಮಾಹಿತಿ ದೊರೆಯಲಿದೆ.