ಕಡಬ ಟೈಮ್ಸ್, ಕುಟ್ರುಪಾಡಿ: ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಗ್ರಾ.ಪಂ ಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರೂ ಕೆಲ ಜನರು ಪರಿಸರವನ್ನು ದುರ್ನಾತ ಬೀರುವಂತೆ ಮಾಡುತ್ತಾರೆ ಅದಕ್ಕೆ ಉದಾಹರಣೆಯಂತಿದೆ ಹೊಸ್ಮಠ ಹೊಸ ಸೇತುವೆಯ ಮೇಲೆಯೇ ಎಸೆದು ಹೋದ ದುರ್ನಾತ ಬೀರುವ ತ್ಯಾಜ್ಯ
ವಾಹನದಲ್ಲಿ ಬಂದು ನದಿಗೆ ಕಸ ಎಸೆಯುವ ಭರದಲ್ಲಿ ದುರ್ನಾತ ಬೀರುವ ತ್ಯಾಜ್ಯದ ಚೀಲವೊಂದು ಸೇತುವೆ ಮೇಲೆಯೇ ಬಿದ್ದಿದೆ.ಅವಿವೇಕಿಗಳ ಈ ನಡೆಯಿಂದ ವಾಹನ ಸವಾರರು,ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಾಗಬೇಕಾದ ಪ್ರಮೇಯ ಬಂದೊದಗಿದೆ.
ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಗ್ರಾ.ಪಂ ಅಧಿಕಾರಿಗಳು,ಸ್ಥಳೀಯ ನಾಗರಿಕರು ಅಲರ್ಟ್ ಆಗಬೇಕಿದೆ