ಕಡಬ ಟೈಮ್ಸ್, ಸುಬ್ರಹ್ಮಣ್ಯ: ಲಾಕ್ ಡೌನ್ ನಿಯಮ ಸಡಿಲಿಕೆಯ ಬಳಿಕ ಸರ್ಕಾರದ ನಿಯಮದಂತೆ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಸೇವೆಗಳು ಆರಂಭಗೊಂಡಿದೆ.ಆದರೆ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ಇನ್ನೂ ಆರಂಭವಾಗಿಲ್ಲ.
ದೇಗುಲದ ಮುಖ್ಯಾಧಿಕಾರಿ ಕಾರಣಾಂತರ ಗಳಿಂದ ರಜೆಯಲ್ಲಿದ್ದು, ವಾರದಲ್ಲಿ ಅವರು ಕರ್ತವ್ಯಕ್ಕೆ ಆಗಮಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಈಗಲೂ ಪಾಲಿಸಬೇಕಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ಬಂದ ಬಳಿಕ ಸೇವೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿ ,ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ.ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.